ಯಶ್ ಬೆಳೆಯ ಬಾರದು ಎಂದು ಬಾಲಿವುಡ್ ನಟ ಅಮೀರ್ ಖಾನ್ ಮಾಡಿದ ಪಿತೂರಿ ಏನು ಗೊತ್ತಾ

ನಮ್ಮ ದೇಶದಲ್ಲಿ ಸಿನಿಮಾ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರವು ತಕ್ಕಡಿ ಇದ್ದ ಹಾಗೆ. ಉತ್ತುಂಗದಲ್ಲಿದ್ದವರು ಯಾವ ಸಮಯದಲ್ಲಿ ಬೇಕಾದರೂ ಕೆಳಗೆ ಬರಬಹುದು. ಸಿನಿಮಾ ರಂಗವಂತೂ ಹಾವು ಏಣಿ ಆಟ ಇದ್ದಂತೆ ಯಾರು ಮೇಲೆ ಹೋಗುತ್ತಾರೋ ಅವರು ಕೆಳಗೆ ಬರಲಿ ಎಂದು ಮಿಕ್ಕವರು ಆಸೆ ಪಡುತ್ತಿರುತ್ತಾರೆ. ನಮ್ಮ ದೇಶದಲ್ಲಿರುವ ಪ್ರತಿಯೊಂದು ಭಾಷೆಗೂ ಅವರದ್ದೇ ಆದ ಚಿತ್ರ ರಂಗಗಳಿವೆ. ಆದರೆ ಪ್ರಮುಖವಾಗಿ ದಕ್ಷಿಣ ಭಾರತ ಚಿತ್ರರಂಗ ಮತ್ತು ಉತ್ತರ ಭಾರತ ಚಿತ್ರರಂಗ ಎಂದು 2 ವಿಂಗಡಣೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಈ ತಾರತಮ್ಯಗಳು ಕಡಿಮೆಯಾಗಿದೆ. ಯಾಕೆಂದರೆ ಈಗೆಲ್ಲಾ ಬಿಡುಗಡೆಯಾಗುವ ಸಿನಿಮಾಗಳು ಎಲ್ಲಾ ಭಾಷೆಗಳಲ್ಲೂ ಡಬ್ ಆಗಿ, ಪ್ಯಾನ್ ಇಂಡಿಯಾ ಸಿನಿಮಾವಾಗುತ್ತಿದೆ. ಯಾವುದೋ ಒಂದು ಭಾಷೆಗಷ್ಟೇ ಸೀಮಿತವಾಗದೆ, ನಮ್ಮ ಸಿನಿಮಾಗಳು ದೇಶದೆಲ್ಲೆಡೆ ಬಿಡುಗಡೆ ಕಾಣುತ್ತವೆ.

ಬಾಹುಬಲಿ ಮತ್ತು ಕೆಜಿಎಫ್ ನಂತಹ ದಕ್ಷಿಣ ಭಾರತದ ಚಿತ್ರಗಳು ಉತ್ತರ ಭಾರತದಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಉತ್ತರ ಭಾರತದ ಕಲಾರಸಿಕರು ದಕ್ಷಿಣ ಭಾರತದ ಸಿನಿಮಾಗಳನ್ನು ಇಷ್ಟ ಪಡುತ್ತಾರೆ. ಆದರೆ ಉತ್ತರ ಭಾರತದ ಚಿತ್ರರಂಗದ ಕಲಾವಿದರು ದಕ್ಷಿಣ ಭಾರತದ ಕಲಾವಿದರನ್ನು ಮತ್ತು ದಕ್ಷಿಣ ಭಾರತದ ಸಿನಿಮಾಗಳನ್ನು ಹೃತ್ಪೂರ್ವಕವಾಗಿ ಸ್ವಾಗತ ನೀಡುವುದಿಲ್ಲ. ನಮ್ಮ ಚಿತ್ರರಂಗದವರು ಅಲ್ಲಿನ ಕಲಾವಿದರಿಗೆ ಕೊಡುವ ಗೌರವ ಅವರಿಂದ ನಮಗೆ ಸಿಗುವುದಿಲ್ಲ. ಇದು ನಿರಾಶೆಗೊಳಿಸುವ ವಿಷಯ. ಮುಂದಿನ ವರ್ಷ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ – 2 ಚಿತ್ರ ದೇಶದಾದ್ಯಂತ ಬಿಡುಗಡೆ ಆಗಲಿದೆ. ಕೆಜಿಎಫ್-2 ಚಿತ್ರವನ್ನು ಸ್ವಾಗತಿಸುವ ಬದಲು ಅಮೀರ್ ಖಾನ್ ಅವರು ಯಶ್ ಗೆ ನಿರಾಶೆ ಮಾಡಿದ್ದಾರೆ.

ಹೌದು ಗೆಳೆಯರೇ, ಬಾಲಿವುಡ್ ನಟರಾದ ಅಮೀರ್ ಖಾನ್ ಅವರು ಕೆಜಿಎಫ್-2 ಚಿತ್ರ ಬಿಡುಗಡೆ ಆಗುವ ದಿನವೇ ತಮ್ಮ ಹೊಸ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಬಿಡುಗಡೆಯಾಗುವ ದಿನ ಕೆಜಿಎಫ್-2 ಚಿತ್ರಕ್ಕೆ ಹೆಚ್ಚು ಥಿಯೇಟರ್ ಗಳು ಸಿಗುವುದಿಲ್ಲ ಮತ್ತು ಅಮೀರ್ ಖಾನ್ ಚಿತ್ರವನ್ನು ಎದುರಿಸುವ ದೊಡ್ಡ ಸಂ ಕಷ್ಟ ಎದುರಾಗಲಿದೆ. ಅಮೀರ್ ಖಾನ್ ಅವರಿಗಿಂತ ಮೊದಲೇ ಕೆಜಿಎಫ್ ತಂಡದವರು ಏಪ್ರಿಲ್ 14 ರಂದು ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಈ ವಿಷಯ ಅಮೀರ್ ಖಾನ್ ಅವರಿಗೆ ತಿಳಿದಿದ್ದರೂ ಸಹ ಅದೇ ದಿನ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿ.. ಕೆಜಿಎಫ್ ಚಿತ್ರ ತಂಡಕ್ಕೆ ಆ ಘಾತ ಕೊಡಲು ಸಿದ್ಧರಾಗಿದ್ದಾರೆ.

30 ಕ್ಕಿಂತ ಹೆಚ್ಚು ವರ್ಷಗಳ ಕಾಲ ಸಿನಿಮಾ ರಂಗದಲ್ಲಿರುವ ಅಮೀರ್ ಖಾನ್ ಅವರು ಒಬ್ಬ ಯುವ ನಟರಾದ ಯಶ್ ಅವರನ್ನು ಆದರದಿಂದ ಸ್ವಾಗತ ಮಾಡಿಕೊಳ್ಳಬೇಕಾಗಿತ್ತು. 2ವಾರ ಮುಂಚಿತವಾಗಿ ಅಥವಾ ಮುಂಗಡವಾಗಿ ಅಮೀರ್ ಖಾನ್ ಅವರು ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಅವಕಾಶವಿತ್ತು. ಆದರೆ ಅಮೀರ್ ಖಾನ್ ಅವರು ಇಂಥ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಮೂಲ ಕಾರಣ ಕೆಜಿಎಫ್ ಚಿತ್ರದ ಯಶಸ್ಸಿಗೆ ಅಡ್ಡವಾಗಿ ಬರ ಬೇಕು ಎನ್ನುವ ದುರುದ್ದೇ ಶ ಇದ್ದರೂ ಇರಬಹುದು. ಇದೇ ಮೊದಲ ಬಾರಿ ಆದರೆ ಇಂತಹ ಭಿನ್ನಾಭಿಪ್ರಾಯಗಳು ಅಥವಾ ಸಂಶಯಗಳು ಹುಟ್ಟುವುದಿಲ್ಲ. ಆದರೆ ಕೆಜಿಎಫ್ ಚಾಪ್ಟರ್ ೧ ಬಿಡುಗಡೆಯಾದಾಗ ಕೂಡ ಬಾಲಿವುಡ್ ನಟ ಶಾರುಖ್ ಖಾನ್ ಅವರು ಇದೇ ರೀತಿ ವರ್ತಿಸಿದ್ದರು.

ಅಮೀರ್ ಖಾನ್ ಅವರು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತೇನೆ ಎಂದು ನಿರ್ಧಾರ ಮಾಡಿದ ನಂತರ ಯಶ್ ಅವರಿಗೆ ಕಾಲ್ ಮಾಡಿ ಕ್ಷಮೆ ಕೇಳಿದ್ದಾರೆ. ಹಾಗೆ ನನಗೆ ಯಾವುದೇ ಕೆ ಟ್ಟ ಉದ್ದೇಶವಿಲ್ಲ ಎಂದು ಯಶ್ ಅವರಿಗೆ ತಿಳಿಸಿದ್ದಾರಂತೆ. ನಟ ಯಶ್ ಅವರು ಅಮೀರ್ ಖಾನ್ ಅವರ ಮಾತುಗಳನ್ನು ಕೇಳಿಸಿಕೊಂಡು ಸ್ವಲ್ಪ ಖಾರವಾಗಿಯೇ ಉತ್ತರ ನೀಡಿದ್ದಾರೆ. ಅಮೀರ್ ಖಾನ್ ಅವರಿಗೆ ಯಶ್ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ ” ನಿಮ್ಮನ್ನು ನಾನು ಗೌರವಿಸುತ್ತೇನೆ ಮತ್ತು ನಿಮ್ಮ ಹೊಸ ಚಿತ್ರಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆದರೆ ಕೆಜಿಎಫ್ ಚಿತ್ರ ಬಿಡುಗಡೆ ಗೊಳ್ಳಲಿರುವ ಥಿಯೇಟರ್ ಗಳ ಸಂಖ್ಯೆಯ ವಿಷಯದಲ್ಲಿ ನಾನು ರಾಜಿ ಆಗಲು ಬಯಸುವುದಿಲ್ಲ.” ಎಂದು ಯಶ್ ಅಮೀರ್ ಖಾನ್ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ಅಮೀರ್ ಖಾನ್ ಅವರು ತೆಗೆದುಕೊಂಡ ಈ ನಿರ್ಧಾರ ಕನ್ನಡ ಅಭಿಮಾನಿಗಳಿಗಷ್ಟೆ ಅಲ್ಲದೆ ಭಾರತ ಚಿತ್ರರಂಗದ ಹಲವು ಗಣ್ಯರಿಗೆ ಕೂಡ ಬೇಸರ ತಂದಿದೆ.

Leave a Reply

Your email address will not be published. Required fields are marked *