ಹು’ಚ್ಚು’ ಬಸ್ಯಾ ಎಂಬ ಭಿಕ್ಷುಕನ ಅಂ’ತ್ಯ ಸಂಸ್ಕಾರಕ್ಕೆ 5 ಸಾವಿರ ಮಂದಿ ಸೇರಿದ್ದರು. ಭಿಕ್ಷುಕ ಬಸ್ಯಾ ಮಾಡಿದ್ದ ಸಾಧನೆಯಾದರೂ ಏನು ಗೊತ್ತಾ

ದಾನ ಮಾಡಿದರೆ ಅದನ್ನು ಸಾಧನೆ ಇಂದು ನಾವೆಲ್ಲ ನಂಬುತ್ತೇವೆ. ಆದರೆ ಭಿಕ್ಷೆ ಬೇಡಿ ಕೂಡ ಸಾಧನೆ ಮಾಡುವುದು ಅಸಾಧಾರಣ. ನಮ್ಮ ದೇಶದಲ್ಲಿ ಒಬ್ಬ ರಾಜಕಾರಣಿ ಅಥವಾ ಸುಪ್ರಸಿದ್ಧ ನಟ ತೀರಿಕೊಂಡರೆ ಮಾತ್ರ ಸಾವಿರಾರು ಜನರು ಅಂತಿಮ ಯಾತ್ರೆಗೆ ಹಾಜರಾಗುತ್ತಾರೆ. ಒಬ್ಬ ಭಿಕ್ಷುಕ ತೀರಿಕೊಂಡ ಎನ್ನುವ ವಿಷಯಕ್ಕೆ ಸಾವಿರಾರು ಜನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಇಂತಹದೊಂದು ಸಂಗತಿ ನಮ್ಮದೇ ರಾಜ್ಯದ ಹೂವಿನ ಹಡಗಲಿ ಗ್ರಾಮದಲ್ಲಿ ನಡೆದಿದೆ. ಹೂವಿನ ಹಡಗಲಿ ಗ್ರಾಮದ ಹು’ಚ್ಚು’ ಬಸ್ಯಾ ಎಂಬ ಭಿಕ್ಷುಕನ ಅಂತಿಮ ಯಾತ್ರೆಗೆ ಸುಮಾರು 5 ಸಾವಿರ ಮಂದಿ ಹಾಜರಾಗಿದ್ದರು ಎಂಬ ವಿಷಯ ತಿಳಿದು ಇಡೀ ದೇಶವೇ ಮೂಕವಿಸ್ಮಿತರಾಗಿದ್ದಾರೆ.

ಬಸ್ಯಾ ಎಂಬ ಭಿಕ್ಷುಕ ಹುಟ್ಟಿನಿಂದಲೂ ಕೂಡ ಮಾನಸಿಕ ರೋ’ಗಿ’ ಇವನಿಗೆ ಇವನನ್ನು ಹು’ಚ್ಚು’ ಬಸ್ಯಾ ಎಂದೇ ಜನ ಕರೆಯುತ್ತಿದ್ದರು. ತನ್ನ ತಾಯಿಯೊಂದಿಗೆ ರಸ್ತೆ ಪಕ್ಕದಲ್ಲಿ ಕುಳಿತುಕೊಂಡು ಚಿಕ್ಕನಿಂದಲೇ ಭಿಕ್ಷೆ ಬೇಡಲು ಶುರು ಮಾಡಿದ್ದ. ನಂತರದ ಅನಾ’ರೋ’ಗ್ಯದ ಕಾರಣದಿಂದ ಬಸ್ಯಾನ ತಾಯಿ ತೀರಿಕೊಳ್ಳುತ್ತಾಳೆ. ತಾಯಿಯನ್ನು ಕಳೆದುಕೊಂಡ ಮೇಲೆ ಬಸ್ಯಾ ಶಾಲೆಗಳ ಮುಂದೆ ಮತ್ತು ದೇವಸ್ಥಾನಗಳ ಮುಂದೆ ಹೋಗಿ ಭಿಕ್ಷೆ ಬೇಡಲು ಶುರುಮಾಡ್ತಾನೆ. ಹಡಗಲಿ ಗ್ರಾಮಸ್ಥರು ಬಸ್ಯಾನನ್ನು ತುಂಬಾ ಇಷ್ಟಪಡುತ್ತಿದ್ದರು ಮತ್ತು ಅವನಿಗೆ ವಿಶೇಷವಾದ ಗೌರವ ನೀಡುತ್ತಿದ್ದರು.

ಒಬ್ಬ ಸಾಮಾನ್ಯ ಭಿಕ್ಷುಕನಿಗೆ ರಾಜ ಮರ್ಯಾದೆ ಕೊಡುತ್ತಾರೆ ಎಂದರೆ ನಂಬಲು ಅಸಾಧ್ಯ. ಮಾನಸಿಕ ವಿಕ’ಲಾಂ’ಗನಾದರೂ ಹು’ಚ್ಚು’ ಬಸ್ಯಾನನ್ನು ಜನರು ಇಷ್ಟಪಡಲು ಕಾರಣ ಏನೆಂದರೆ.. ಈ ಭಿಕ್ಷುಕ ಯಾರೇ ಭಿಕ್ಷೆ ಹಾಕಿದರೂ ಸಹ ಕೇವಲ 1 ರೂಪಾಯಿಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದ. ಅಕಸ್ಮಾತ್ ಯಾರೊಬ್ಬರು ಹತ್ತು ರೂಪಾಯಿಯನ್ನು ಕೊಟ್ಟರೂ ಸಹ ಉಳಿದ 9 ರೂಪಾಯಿ ಚಿಲ್ಲರೆಯನ್ನು ಹಿಂತಿರುಗಿಸಿ ನೀಡುತ್ತಿದ್ದ. ಬಸ್ಯಾನನ್ನು ಗ್ರಾಮಸ್ಥರು ಗ್ರಾಮದ ಅದೃಷ್ಟ ಸಂಕೇತ ಎಂದೇ ಭಾವಿಸಿದ್ದರು. ಯಾವುದೇ ಶುಭ ಕಾರ್ಯವನ್ನು ಮಾಡುವುದಕ್ಕಿಂತ ಮುಂಚೆ ಊರಿನ ಜನರು ಹು’ಚ್ಚು’ ಬಸ್ಯಾ ಗೆ 1 ರುಪಾಯಿಯನ್ನು ಕೊಡುತ್ತಿದ್ದರು.

ಬಸ್ಯಾ ಗೆ 1 ರೂಪಾಯಿಯನ್ನು ಕೊಟ್ಟರೆ ಅದೃಷ್ಟ ಒಲಿಯುತ್ತದೆ ಎಂಬ ಆಶಾಭಾವನೆ ಜನರಲ್ಲಿತ್ತು. ಬಸ್ಯಾ ಕಾಲಿಟ್ಟಲ್ಲಿ ಯಾವುದೇ ವಿಘ್ನಗಳು ಆಗುವುದಿಲ್ಲ ಎಂದು ಜನರು ನಂಬಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ಬಸ್ಯಾನನ್ನು ಜನರು ದೈವರೂಪದಲ್ಲಿ ಕಾಣುತ್ತಿದ್ದರು. ಈತನ ನಿಷ್ಕಲ್ಮಶ ನಗು ಮತ್ತು ಮಗುವಿನಂಥ ಮನಸ್ಸು ಪ್ರತಿಯೊಬ್ಬರಿಗೂ ಟಚ್ ಆಗುತ್ತಿತ್ತು. ಊಟ ಬಟ್ಟೆಗಳನ್ನು ಕೊಟ್ಟರೆ ಬಸ್ಯಾ ಖುಷಿಯಿಂದ ತೆಗೆದುಕೊಳ್ಳುತ್ತಿದ್ದ. ಊರಿನ ಜನರು ಯಾವುದೇ ಒಂದು ಉತ್ತಮ ಕಾರ್ಯಕ್ಕೆ ಕೈ ಹಾಕುವುದಕ್ಕಿಂತ ಮುಂಚೆ ಬಸ್ಯಾನ ಆಶೀರ್ವಾದ ಪಡೆಯುತ್ತಿದ್ದರು. ಪ್ರತಿಯೊಬ್ಬರನ್ನೂ ಏಕವಚನದಲ್ಲೇ ಮಾತಾಡಿಸುತ್ತಿದ್ದ ಬಸ್ಯಾ ಎಲ್ಲರಿಗೂ ಸಮನಾದ ಗೌರವ ನೀಡುತ್ತಿದ್ದ.

ದೊಡ್ಡ ದೊಡ್ಡ ವ್ಯಾಪಾರಿಗಳು ಮತ್ತು ಪ್ರಸಿದ್ಧ ರಾಜಕಾರಣಿಗಳು ಕೂಡ ಬಸ್ಯಾನ ಅಭಿಮಾನಿಗಳೇ. ಬಸ್ಯಾನ ನನ್ನು ಸಂತೃಪ್ತಿ ಪಡಿಸಿದ ನಂತರವೇ ತಮ್ಮ ಇಷ್ಟ ಕಾರ್ಯಗಳಿಗೆ ಕೈ ಹಾಕಿದ್ದು೦ಟು. ಎಂ.ಪಿ ಪ್ರಕಾಶ್ ಮತ್ತು MLA ಪರಮೇಶ್ವರ್ ಅವರು ಬಸ್ಯಾ ಗೆ 1₹ ಕೊಟ್ಟು ಆಶೀರ್ವಾದ ಪಡೆಯುತ್ತಿದ್ದರು. ಈಗಿನ ಕಾಲದಲ್ಲಿ 1 ರೂಪಾಯಿಯನ್ನು ತೆಗೆದುಕೊಂಡು ಸ್ವಚ್ಛ ಮನಸ್ಸಿನಿಂದ ಮುಗುಳ್ನಗೆ ನೀಡುವ ಮನುಷ್ಯ ಹುಡುಕಿದರೂ ಸಿಗುವುದಿಲ್ಲ. ನಗುವಿನ ಒಡೆಯ ಮತ್ತು ಅದೃಷ್ಟ ರಾಜ ಎಂದೇ ಹೆಸರಾಗಿದ್ದ ಬಸ್ಯಾ ನವೆಂಬರ್ 17 ರಂದು ರಸ್ತೆ ಅಪ’ಘಾ’ತದಲ್ಲಿ ಸಾ’ವ’ನ್ನಪ್ಪಿದ್ದಾನೆ.

ನಡು ರಸ್ತೆಯಲ್ಲಿ ಹೋಗುತ್ತಿದ್ದ ಬಸ್ಯಾ ಗೆ ಬಸ್ ಡಿ’ಕ್ಕಿ’ ಹೊಡೆದು ಇಹಲೋಕ ತ್ಯಜಿಸಿದ್ದಾನೆ. ಬಸ್ಯಾನನ್ನು ಭರ್ಜರಿಯಾಗಿ ಬೀಳ್ಕೊಡುವ ಉದ್ದೇಶದಿಂದ ಬಸ್ಯಾನ ಅಂತಿಮ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಊರಿನ ಪ್ರತಿ ಗಲ್ಲಿಗಳಲ್ಲೂ ಬಸ್ಯಾನ ಫೋಟೋಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ . ಆ ದಿನ ಗ್ರಾಮಸ್ಥರೆಲ್ಲ ಬಿಕ್ಕಿ ಬಿಕ್ಕಿ ಅ’ಳು’ತ್ತಾ ರಸ್ತೆ ಮೇಲೆ ಭಾವುಕರಾಗಿ ನಿಂತಿದ್ದರು. ಪ್ರತಿಯೊಬ್ಬರಿಗೂ ಸ್ವಂತ ಸಂಬಂಧಿಕನನ್ನೇ ಕಳೆದುಕೊಂಡಿದ್ದೇವೆ ಅನ್ನುವಷ್ಟು ದುಃ’ಖ’ವಾಗಿತ್ತು. 30 ವರ್ಷಗಳಿಂದ ಊರಿನ ಅದೃಷ್ಟದ ಆಭರಣವಾಗಿದ್ದ ಬಸ್ಯಾ ಇನ್ಮೇಲೆ ಇಲ್ಲ ಎಂಬ ವಿಷಯವನ್ನು ಅರಗಿಸಿಕೊಳ್ಳೋದು ಗ್ರಾಮಸ್ಥರಿಗೆ ಕಷ್ಟವಾಗಿದೆ.

Leave a Reply

Your email address will not be published. Required fields are marked *