ರಾಜಾ ರಾಣಿ ಶೋನಲ್ಲಿ ಗೆದ್ದ ನೇಹಾ ಮತ್ತು ಚಂದನ್ ಗೆ ಕಲರ್ಸ್ ಕನ್ನಡ ನೀಡಿದ ಹಣ ಎಷ್ಟು ಗೊತ್ತಾ

ಕಲರ್ಸ್ ಕನ್ನಡದಲ್ಲಿ ರಾಜಾ ರಾಣಿ ಎಂಬ ಪ್ರಸಿದ್ಧ ಬರುತ್ತಿತ್ತು. ಇದು ಕೆಲ ದಿನಗಳ ಹಿಂದೆ ಮುಗಿದಿದೆ ಇದು ಸೆಲೆಬ್ರಿಟಿಗಳಿಗೆ ಅಂತಾನೇ ಮಾಡಿರೋ ಶೋ ಆಗಿತ್ತು. ಇದರಲ್ಲಿ ಸುಮಾರು ಹದಿನೈದು ಸೆಲೆಬ್ರಿಟಿ ಗಂಡ ಹೆಂಡತಿಗಳು ಭಾಗವಹಿಸಿದ್ದರು. ಈ ಶೋನಲ್ಲಿ ಭಾಗವಹಿಸಿದ್ದ ಎಲ್ಲರೂ ಕೂಡ ಜನರ ಮನಸ್ಸನ್ನು ಗೆದ್ದಿದ್ದಾರೆ ಆದರೆ ಕೊನೆಯಲ್ಲಿ ಈ ಶೋದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿತು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನೇಹಾ ಮತ್ತು ಅವರ ಗಂಡ ಚಂದನ್.

ಈ ಶೋ ಶನಿವಾರ ಮತ್ತು ರವಿವಾರ ಪ್ರಸಾರವಾಗುತ್ತಿತ್ತು. ಬಿಗ್ ಬಾಸ್ ನಂತರ ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ ರಾಜ ರಾಣಿ ಎಂದರೆ ತಪ್ಪಾಗಲಾರದು. ಅಂದಹಾಗೆ ಈ ಶೋನಲ್ಲಿ ಹಳೆಯ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೂಡ ಭಾಗವಹಿಸಿದ್ದರು. ಅವರು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಬಿಗ್ ಬಾಸ್ ನಲ್ಲಿ ಅವರಿಬ್ಬರ ಜೋಡಿ ತುಂಬಾನೇ ಮೋಡಿ ಮಾಡಿತ್ತು ಆದರೆ ರಾಜ ರಾಣಿ ಯಲ್ಲಿ ಈ ಜೋಡಿಯನ್ನ ಹಿಂದಿಕ್ಕಿಸಿ ನೇಹಾ ಮತ್ತು ಚಂದನ್ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರಥಮ ಸ್ಥಾನ ಗಳಿಸಿಕೊಂಡ ನೇಹಾ ಮತ್ತು ಚಂದನ್ ಅವರಿಗೆ ಕಲರ್ಸ್ ಕನ್ನಡ ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಿದೆ ಸ್ನೇಹಿತರೆ. ಎರಡನೇ ಸ್ಥಾನಕ್ಕೆ ಇಶಿತಾ ಮತ್ತು ಮುರುಗನ್ ಅವರು ವಿಜೇತರಾಗಿದ್ದಾರೆ. ಅವರಿಗೆ ಕಲರ್ಸ್ ಕನ್ನಡ ಎರಡೂವರೆ ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಿದೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಇರುವ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೆ 1 ಲಕ್ಷ ರೂಪಾಯಿಗಳನ್ನು ನೀಡಿದೆ.

ಈ ಬಹುಮಾನ ಎಷ್ಟು ದೊಡ್ಡದು ಎಂಬುದಕ್ಕಿಂತ ಈ ಶೋನಲ್ಲಿ ಅವರು ಗಳಿಸಿದ ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನೇಹಾ ಅವರ ಗಂಡ ಚಂದನ್ ಅವರು ಚಿತ್ರರಂಗದವರು ಅಲ್ಲ ಆದರೂ ಅವರು ನೃತ್ಯವನ್ನು ಕೂಡ ಚೆನ್ನಾಗಿ ಮಾಡುತ್ತಾರೆ. ಅವರು ನೋಡಲು ಹೀರೋ ತರಹ ಕಾಣುತ್ತಾರೆ. ಮುಂದೊಂದಿನ ಅವರಿಗೂ ಚಿತ್ರರಂಗದಲ್ಲಿ ಆಸಕ್ತಿ ಬಂದು ಹೀರೋ ಆಗಿ ಕೂಡ ಕಾಣಿಸಿಕೊಳ್ಳಬಹುದು. ಆಗಿ ಈ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ಆಚಾರ್ಯರು ಮತ್ತು ಅವರ ಪತ್ನಿ ಕೂಡ ಭಾಗವಹಿಸಿದ್ದರು.

ಹಾಗೆ ಸ್ಟ್ಯಾಂಡಪ್ ಕಾಮಿಡಿಯನ್ ಹಿಂದ ಪ್ರಸಿದ್ಧರಾದ ಪವನ್ ವೇಣುಗೋಪಾಲ್ ಅವರು ಕೂಡ ಈ ಶೋನಲ್ಲಿ ಭಾಗವಹಿಸಿ ತಮ್ಮ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿಕೊಂಡಿದ್ದಾರೆ. ಇವರ ಹೆಂಡತಿ ಬೇರೆ ರಾಜ್ಯದವರು. ಇವರಿಗೆ ಕನ್ನಡ ಬರುತ್ತಿರಲಿಲ್ಲವಂತೆ, ಆದರೆ ಪವನ್ ಅವರನ್ನು ಮದುವೆಯಾದ ಮೇಲೆ ಅವರು ಕೂಡ ಈಗ ಅತ್ಯುತ್ತಮವಾಗಿ ಕನ್ನಡವನ್ನು ಮಾತನಾಡಲು ಶುರು ಮಾಡಿ ಇಂದು ಕನ್ನಡ ಶೋನಲ್ಲಿ ಬಂದು ಭಾಗವಹಿಸಿದ್ದಾರೆ, ಇದು ಖುಷಿಯ ವಿಚಾರ.

Leave a Reply

Your email address will not be published. Required fields are marked *