ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಬೌನ್ಸ್ ಕಂಪನಿಯ ಹೈಟೆಕ್ ಎಲೆಕ್ಟ್ರಿಕ್ ಸ್ಕೂಟರ್

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರಿರುವುದರಿಂದ ಮುಂದಿನ ದಿನಗಳಲ್ಲಿ ತಾಂತ್ರಿಕ ಬದಲಾವಣೆಗಳು ಆಗುವ ಅವಕಾಶಗಳಿದೆ. ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳನ್ನು ಬಳಸಿ ಓಡಿಸಲಾಗುತ್ತಿರುವ ವಾಹನಗಳನ್ನು ಸೈಡಿಗೆ ಹಾಕಿ, ಇನ್ಮುಂದೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತೆ. ಮುಂದಿನ ಭವಿಷ್ಯದ ದಿನಗಳನ್ನು ಆಧುನಿಕ EV(ಎಲೆಕ್ಟ್ರಿಕ್ ವೆಹಿಕಲ್ ) ಯುಗ ಎಂದೇ ಕರೆಯಬಹುದು. ನರೇಂದ್ರ ಮೋದಿ ಅವರು ಜಾರಿಗೆ ತಂದ ಆತ್ಮ ನಿರ್ಭರ್ ಯೋಜನೆಯಿಂದ ಪ್ರೇರೇಪಿತರಾಗಿ ಹಲವಾರು ಕಂಪೆನಿಗಳು ಎಲೆಕ್ಟ್ರಿಕ್ ವೆಹಿಕಲ್ ಗಳನ್ನು ತಯಾರು ಮಾಡಲು ಮುಂದಾಗಿದ್ದಾರೆ. ಈಗಾಗಲೇ ಮಾರುಕಟ್ಟೆಗೆ ಓಲಾ,ಅತ್ತರ್, ಟಿವಿಎಸ್, ಬಜಾಜ್ ಮತ್ತು ಹೀರೋ ಕಂಪೆನಿಗಳ ಸ್ಕೂಟರ್ ಗಳು ಲಗ್ಗೆ ಇಟ್ಟಿವೆ.

ಎಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ ಓಲಾ ಕಂಪೆನಿಯ ಸ್ಕೂಟರ್ ಗಳು ನೋಡಲು ಐಷಾರಾಮಿಯಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತವೆ. ಸದ್ಯದ ಮಟ್ಟಿಗೆ ಓಲಾ ಕಂಪೆನಿಯು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ. ಓಲಾ ಕಂಪೆನಿಯ ಸ್ಕೂಟರ್ ಗಳು ತುಂಬಾ ದುಬಾರಿ. 50 ಸಾವಿರ ರೂಪಾಯಿಗಿ೦ತ ಕಡಿಮೆ ಬೆಲೆಯಲ್ಲಿ ಓಲಾ ಸ್ಕೂಟರ್ ಗಳು ಸಿಗಲ್ಲ. ಇದರಿಂದ ಹಲವು ಜನರು ನಿರಾಶ್ರಿತರಾಗಿದ್ದರು. ಜನರ ಅಗತ್ಯವನ್ನು ನಿವಾರಿಸಲು ಇದೀಗ ಭಾರತದ ಮಾರುಕಟ್ಟೆಗೆ ಬೌನ್ಸ್ ಕಂಪೆನಿ ತನ್ನ ಸ್ಕೂಟರ್ ಗಳನ್ನು ಲಾಂಚ್ ಮಾಡಲಿದೆ. ಈ ಸ್ಕೂಟರ್ ಗಳು ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ.

ಬೌನ್ಸ್ ಇನ್ಪಿನಿಟಿ ಸ್ಕೂಟರ್ ಕೇವಲ 50 ಸಾವಿರ ರೂಪಾಯಿಗೆ ಸಿಗಲಿದೆ. ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನೀವು ಖರೀದಿ ಮಾಡಬೇಕೆಂದರೆ ಮುಂಚಿತವಾಗಿಯೇ 499 ರೂಪಾಯಿಗಳನ್ನು ನೀಡಿ ಬುಕ್ ಮಾಡಬೇಕಾಗುತ್ತದೆ. ಬುಕ್ಕಿಂಗ್ ಡಿಸೆಂಬರ್ 2 ನೇ ತಾರೀಕಿನಿಂದ ಶುರುವಾಗಲಿದೆ. ಬುಕ್ ಮಾಡಿದ ಸ್ಕೂಟರ್ ಗಳನ್ನು ಕಂಪನಿಯವರು ಮುಂದಿನ ವರ್ಷ ಜನವರಿಯಲ್ಲಿ ಡೆಲಿವರಿ ಮಾಡುತ್ತಾರೆ. ಈ ಸ್ಕೂಟಿಯಲ್ಲಿ ಸ್ವ್ಯಾಪಿಂಗ್ ಬ್ಯಾಟರಿ ಸೌಲಭ್ಯ ಕೂಡ ಇದೆ. ಬ್ಯಾಟರಿಯ ಶಕ್ತಿ ಖಾಲಿಯಾದಂತೆ ಹಳೆಯ ಬ್ಯಾಟರಿ ತೆಗೆದು ಹೊಸ ಬ್ಯಾಟರಿ ಹಾಕುವ ಸೌಲಭ್ಯ ಇರುತ್ತದೆ. ಅಥವಾ ಬ್ಯಾಟರಿಯನ್ನು ಪದೇಪದೇ ಚಾರ್ಜ್ ಮಾಡುವಂಥ ಸೌಲಭ್ಯ ಕೂಡ ಈ ಸ್ಕೂಟಿ ಹೊಂದಿರುತ್ತದೆ.

ಬೌನ್ಸ್ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳ ಇನ್ನೂ ಕೆಲವು ವಿಶೇಷತೆಗಳು ಏನೆಂದರೆ ಈ ಸ್ಕೂಟಿಗಳು ಮುಂದಗಡೆ ಹಾಗೂ ಹಿಂದಗಡೆ ಡಿಸ್ಕ್ ಬ್ರೇಕ್ ಹೊಂದಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ರಿಯರ್ ಸಸ್ಪೆಂಕ್ಷನ್ ಸೌಲಭ್ಯ ಗಳನ್ನು ಈ ಸ್ಕೂಟಿ ಒಳಗೊಂಡಿದೆ. ಇನ್ನೂ ಕೆಲವು ಅತ್ಯಾಧುನಿಕ ಸೌಲಭ್ಯ ಗಳಾದ ರೆಡ್ ಹೆಡ್ ಲ್ಯಾಂಪ್ , ಎಲ್ ಸಿಡಿ ಸ್ಕ್ರೀನ್, ಸ್ಪೋರ್ಟ್ಸ್ ಬೈಕ್ ನಲ್ಲಿ ಕಾಣಸಿಗುವ ವೀಲ್ ಗಳು ಮತ್ತು ರೆಟ್ರೋ ರೂಪದ ಫಂಡರ್ ನಂತಹ ಡೈನಾಮಿಕ್ ರೇಖಾ ಕೃತಿಯನ್ನು ಈ ಸ್ಕೂಟರ್ ಗಳು ಹೊಂದಿರುತ್ತವೆ.

ನೀವು ಓಲಾ ಸ್ಕೂಟರ್ ಗಳನ್ನು ಖರೀದಿ ಮಾಡುತ್ತೀರಿ ಅಂದರೆ ನಿಮಗೆ ಸುಮಾರು 1 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಆದರೆ ಈ ಬೌನ್ಸ್ ಸ್ಕೂಟರ್ ಗಳನ್ನು ನೀವು 50 ಸಾವಿರ ರೂಪಾಯಿಗಿಂತಲೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದು. ಬೌನ್ಸ್ ಕಂಪನಿಯವರು ಈಗಾಗಲೇ ಕ್ಕೂ ಹೆಚ್ಚಿನ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಎಲ್ಲ ಪಟ್ಟಣಗಳಲ್ಲೂ ಕೂಡ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಗಳು ನಿರ್ಮಾಣವಾಗಲಿದೆ. ಒಂದು ಸಲ ಚಾರ್ಜ್ ಮಾಡಿದಲ್ಲಿ ನೀವು ಸುಮಾರು 85 -150 ಕಿಲೋ ಮೀಟರ್ ದೂರವನ್ನು ಆರಾಮಾಗಿ ಚಲಿಸಬಹುದು. ಲಕ್ಷ ಲಕ್ಷ ಕೊಟ್ಟು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿ ಮಾಡುವಷ್ಟು ಅನುಕೂಲತೆ ಇಲ್ಲದೇ ಇದ್ದರೆ ಬೌನ್ಸ್ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ನಿಮಗೆ ತಕ್ಕ ಆಯ್ಕೆಯಾಗಲಿದೆ.

Leave a Reply

Your email address will not be published. Required fields are marked *