ಈ ದಕ್ಷಿಣ ಭಾರತದ ನಟಿಯರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಹಣವೆಷ್ಟು ಕೇಳಿದರೆ ತಲೆ ತಿ’ರು’ಗುತ್ತೆ

ನಮ್ಮ ಭಾರತ ದೇಶದಲ್ಲಿ ಮನೋರಂಜನೆಯ ವಿಷಯಕ್ಕೆ ಬಂದರೆ ಕ್ರಿಕೆಟ್ ಮತ್ತು ಸಿನೆಮಾಗಳು ಅಗ್ರಸ್ಥಾನದಲ್ಲಿವೆ. ಕ್ರಿಕೆಟ್ ಆಟಗಾರರನ್ನು ಮತ್ತು ಸಿನಿಮಾ ನಟರನ್ನು ಅಭಿಮಾನಿಗಳು ದೇವರ ರೂಪದಲ್ಲಿ ಕಾಣುತ್ತಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಆಟಗಾರರು ಮತ್ತು ಸಿನೆಮಾ ನಟರು ಜನಪ್ರಿಯತೆ ಮತ್ತು ಧನಪ್ರಿಯತೆ ಎರಡನ್ನೂ ಕೂಡ ಸಂಪಾದನೆ ಮಾಡುತ್ತಾರೆ. ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನ ಇಡೀ ಜೀವಮಾನದಲ್ಲಿ ದುಡಿಯುವಷ್ಟು ಹಣವನ್ನು ಸಿನೆಮಾ ನಟ-ನಟಿಯರು ಒಂದೇ ಒಂದು ಸಿನಿಮಾದಲ್ಲಿ ದುಡಿಯುತ್ತಾರೆ. ಸಿನೆಮಾ ನಟರಷ್ಟೇ ಅಲ್ಲದೆ ಸಿನಿಮಾ ನಟಿಯರು ಕೂಡ ಯಾವುದಕ್ಕೂ ಕಮ್ಮಿ ಇಲ್ಲ. ನಟಿಯರು ಸಿನಿಮಾದಲ್ಲಿ ಕಡಿಮೆ ಅವಧಿ ಕಾಣಿಸಿಕೊಂಡರೂ ಸಹ ಅವರ ಬೇಡಿಕೆ ಕೋಟಿ ಲೆಕ್ಕದಲ್ಲಿ ಇರುತ್ತದೆ. ದಕ್ಷಿಣ ಭಾರತದ ನಟಿಯರು ಕೂಡ ಕೋಟಿ ಕೋಟಿ ಹಣ ಬರೆಯುತ್ತಾರೆಂದರೆ ನೀವೆಲ್ಲಾ ನಂಬಲೇ ಬೇಕು.

ಉತ್ತರ ಭಾರತದ ನಟಿಯರು ಕೋಟಿಗಟ್ಟಲೆ ಹಣ ಪಡೆಯುತ್ತಾರೆ ಎಂದು ನಾವೆಲ್ಲಾ ಕೇಳಿರುತ್ತೇವೆ. ಆದರೆ ನಮ್ಮ ದಕ್ಷಿಣ ಭಾರತದ ನಟಿಯರು ಯಾವುದಕ್ಕೂ ಕಮ್ಮಿ ಇಲ್ಲ. ಸಿನೆಮಾ ಹೀರೋಗೆ ಸರಿಸಮನಾದ ಸಂಭಾವನೆಯನ್ನು ಹೀರೋಯಿನ್ ಗಳು ಕೂಡ ಪಡೆಯುತ್ತಾರೆ. ಹೆಚ್ಚು ಹಣ ಪಡೆಯುವ ಟಾಪ್ ಹೀರೋಯಿನ್ ಗಳ ಪಟ್ಟಿಯಲ್ಲಿ ನಯನತಾರಾ ತಮನ್ನಾ ಶ್ರುತಿ ಹಾಸನ್ ಮತ್ತು ಸಮಂತಾ ಅವರ ಹೆಸರಿದೆ. ಹಾಗಾದರೆ ಇವರೆಲ್ಲ ಎಷ್ಟು ಪಡೆಯುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ.. ಮೊದಲಿಗೆ ನಟಿ ನಯನತಾರಾ ಅವರು ಕನ್ನಡ ತಮಿಳು ಮಲಯಾಳಂ ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಸುಮಾರು 75 ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. 2021 ರ ಪ್ರಕಾರ ನಯನ್ ತಾರಾ ಅವರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಹಣ ಸುಮಾರು 4 ಕೋಟಿ ರುಪಾಯಿಗಳು . ಗಾಡ್ ಫಾದರ್ ಎಂಬ ಚಿತ್ರದಲ್ಲಿ ಅವರು ನಟಿಯಾಗಿ ಅಭಿನಯಿಸಲು 4 ಕೋಟಿ ಕೇಳಿದ್ದಾರೆ.

ಎರಡನೆಯದಾಗಿ ಮಿಲ್ಕಿ ಬ್ಯೂಟಿ ತಮನ್ನಾ. ಬಾಹುಬಲಿ ಅಂತಹ ಬಿಗ್ ಸಿನಿಮಾಗಳಲ್ಲಿ ನಟಿಸಿದ್ದ ತಮನ್ನಾ ಅವರು ದೇಶಮಟ್ಟದಲ್ಲಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಬಾಹುಬಲಿ ಸಿನಿಮಾದ ಎರಡನೆ ಅಧ್ಯಾಯದಲ್ಲಿ ತಮನ್ನಾ ಅವರು ನಟಿಸಲು ಸುಮಾರು 8ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಇನ್ನೂ 2021 ರ ಪ್ರಕಾರ ತಮನ್ನಾ ಅವರು ಒಂದು ಚಿತ್ರ ದಲ್ಲಿ ನಟಿಸಲು ಸುಮಾರು 3 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಬೋಲಾ ಶಂಕರ್ ಎಂಬ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಲು ತಮನ್ನಾ ಅವರು 3cಕೋಟಿ ರೂಪಾಯಿಗಳನ್ನು ಬೇಡಿಕೆ ಇಟ್ಟಿದ್ದಾರೆ. ಈ ನಟಿ ಈಗಾಗಲೇ 65 ಸಿನಿಮಾಗಳನ್ನು ಮಾಡಿದ್ದಾರೆ ಮತ್ತು 3 ಭಾಷೆಗಳಲ್ಲಿ ಇವರು ನಟನೆ ಮಾಡಿದ್ದಾರೆ.

ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಅವರ ಹೆಸರು ಕೂಡ ಇದೆ. ಹುಟ್ಟುತ್ತಲೇ ತನ್ನ ತಂದೆಯಿಂದ ಅಭಿನಯವನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಶ್ರುತಿ ದಕ್ಷಿಣ ಭಾರತದಲ್ಲಿ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ನಂತರ, ಉತ್ತರ ಭಾರತದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಬಾಲಿವುಡ್ ಖ್ಯಾತಿಯ ಅಕ್ಷಯ್ ಕುಮಾರ್ ಅವರ ಜೊತೆ ಕೂಡ ಇವರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಸನ್ ಅವರು ಒಂದು ಸಿನಿಮಾ ದಲ್ಲಿ ನಾಯಕಿ ಯಾಗಿ ತೆರೆ ಮೇಲೆ ಬರಲು 2 ರಿಂದ 3 ಕೋಟಿ ಹಣ ಪಡೆಯುತ್ತಾರೆ. ತೆಲುಗು ಚಿತ್ರರಂಗದ ಹಿರಿಯ ನಟ ಬಾಲಯ್ಯ ಅವರ ಜೋತೆ ನಾಯಕಿ ಯಾಗಿ ಕಾಣಿಸಿಕೊಳ್ಳಲು ಶ್ರುತಿ ಅವರು 2.5 ಕೋಟಿ ಸಂಭಾವನೆ ಪಡೆದಿದ್ದಾರೆ.

ದಕ್ಷಿಣ ಭಾರತದ ಸ್ಟಾರ್ ನಟಿಯರ ಲಿಸ್ಟ್ ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವವರು ಅಂದರೆ ಅದು ನಟಿ ಸಮಂತಾ. ಉಳಿದ ನಟಿಯರು ಸಂಪೂರ್ಣ ಚಿತ್ರದಲ್ಲಿ ಅಭಿನಯಿಸಲು ಕೋಟಿ ಕೋಟಿ ಹಣ ಕೇಳಿದರೆ, ಈ ನಟಿ ಕೇವಲ 5 ನಿಮಿಷ ಡಾನ್ಸ್ ಮಾಡಲು ಕೋಟಿ-ಕೋಟಿ ಹಣ ಕೇಳುತ್ತಾಳೆ. ದಕ್ಷಿಣ ಭಾರತ ಅಷ್ಟೇ ಅಲ್ಲದೆ ಬಾಲಿವುಡ್ ಡೈರೆಕ್ಟರ್ ಗಳು ಕೂಡ ಸಮಂತಾ ಅವರ ಡೇಟ್ ಪಡೆಯಲು ತುದಿಗಾಲಲ್ಲಿ ನಿಂತಿರುತ್ತಾರೆ. ಕೇವಲ ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ ವೆಬ್ ಸೀರಿಸ್ ಗಳನ್ನು ಕೂಡ ಸಮಂತಾ ಅವರು ಅಭಿನಯಿಸಿದ್ದಾರೆ. ತೆಲುಗು ನಟ ಅಲ್ಲು ಅರ್ಜುನ್ ಅವರು ಅಭಿನಯಿಸುತ್ತಿರುವ ಪುಷ್ಪಾ ಎನ್ನುವ ಚಿತ್ರದಲ್ಲಿ ಸಮಂತಾ ಅವರು ಐ ಟಂ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 5 ನಿಮಿಷಗಳ ಕಾಲ ಅಲ್ಲು ಅರ್ಜುನ್ ಅವರ ಜೊತೆ ಸ್ಟೆಪ್ ಹಾಕಲು ಸಮಂತ್ ಅವರು 2 ಕೋಟಿ ಹಣವನ್ನು ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜ ಹೇಳಬೇಕೆಂದರೆ ಇವರಿಗೆ ಡ್ಯಾನ್ಸ್ ಮಾಡಲು ಕೊಡುವ ಮೊತ್ತ ಕ್ಕಿಂತ ಕಡಿಮೆ ಹಣದಲ್ಲಿ ಅಂದರೆ.. ಕೇವಲ 1.5 ಕೋಟಿ ಹಣ ಇಟ್ಟುಕೊಂಡು ಇತ್ತೀಚೆಗೆ ತೆರೆಕಂಡ ಕನ್ನಡ ಸಿನೆಮಾ, ಗರುಡಗಮನ ಗಮನ ವೃಷಭವಾಹನ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

Leave a Reply

Your email address will not be published. Required fields are marked *