‘ಕೆಜಿಎಫ್ 2’ Vs ‘ಲಾಲ್ ಸಿಂಗ್ ಛಡ್ಡಾ’. ಯಶ್ ಗೆ ಕಾಲ್ ಮಾಡಿ ಅಮೀರ್ ಖಾನ್ ಕ್ಷಮೆ ಕೇಳಿದ್ದೇಕೆ ಗೊತ್ತಾ

ಕೆಜಿಎಫ್ ಮೊದಲ ಭಾಗದ ಕನ್ನಡಿಗರ ಚಿತ್ರವಾಗಿತ್ತು ಮತ್ತು ಕನ್ನಡಿಗರ ಹೆಮ್ಮೆ ಆಗಿತ್ತು. ಬಹುದೊಡ್ಡ ಯಶಸ್ಸು ಕಂಡ ನಂತರ ದೇಶ ಮಟ್ಟದಲ್ಲಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಜಿಎಫ್ಗೆ ಹೆಗ್ಗಳಿಕೆ ದೊರಕಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಕೆಜಿಎಫ್ ಚಾಪ್ಟರ್ 2 ಸಿನೆಮಾ ಕನ್ನಡಿಗರ ಹೆಮ್ಮೆಯ ಅಷ್ಟೇ ಅಲ್ಲ ಇದು ನಮ್ಮ ದೇಶದ ಹೆಮ್ಮೆಯ ಚಿತ್ರವಾಗಲಿದೆ. ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಟ್ರೇಲರ್ ವೀಕ್ಷಣೆ ಪಡೆದುಕೊಂಡ ಏಕೈಕ ಸಿನಿಮಾ ಅಂದರೆ ಕೆಜಿಎಫ್-2. ಈ ಚಿತ್ರವನ್ನು ನೋಡಲು ಇಡೀ ದೇಶವೇ ತುದಿಗಾಲಲ್ಲಿ ನಿಂತಿದೆ. ಮುಂದಿನ ವರ್ಷ ಏಪ್ರಿಲ್ 14 ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಲಿದೆ.

ಕೆಜಿಎಫ್ ಚಿತ್ರ ತಂಡ ಬಿಡುಗಡೆ ಹೊಂದಿದ ದಿನ ಅಗ್ನಿಪರೀಕ್ಷೆ ಎದುರಿಸಬೇಕಿದೆ. ಕೆಜಿಎಫ್-2 ಬಿಡುಗಡೆ ಆಗುವ ದಿನವೇ ಅಂದರೆ ಏಪ್ರಿಲ್ 14 ಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ “ಲಾಲ್ ಸಿಂಗ್ ಚಡ್ಡಾ” ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಅಮೀರ್ ಖಾನ್ ಅವರ ಚಿತ್ರದ ಮುಂದೆ ಗೆಲುವು ಸಾಧಿಸುವುದು ಸುಲಭದ ಮಾತಲ್ಲ. ಅಮೀರ್ ಖಾನ್ ಅವರ ಚಿತ್ರ ಮತ್ತು ತಮ್ಮ ಕೆಜಿಎಫ್ ಚಿತ್ರದ ನಡುವೆ ಜಟಾಪಟಿ ನಡೆಯಲಿದೆ. ಎರಡು ಚಿತ್ರಗಳ ಪೈಕಿ ಯಾವ ಚಿತ್ರ ಜಯಭೇರಿ ಸಾಧಿಸುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ. ಕೆಜಿಎಫ್ ಚಾಪ್ಟರ್ 1 ಈಗಾಗಲೇ ಯಶಸ್ಸು ಸಾಧಿಸಿದ್ದರಿಂದ ಕೆಜಿಎಫ್ ಚಾಪ್ಟರ್ 2 ಕೂಡ ಹಿಟ್ ಆಗುವ ಆಶಾಭಾವನೆ ಇದೆ.

ಏಪ್ರಿಲ್ 14 ಕ್ಕೆ ಅಮೀರ್ ಖಾನ್ ಅವರ ಚಿತ್ರ ಬಿಡುಗಡೆ ಆಗುವುದರಿಂದ ಕೆಜಿಎಫ್ ಚಿತ್ರಕ್ಕೆ ಉತ್ತರ ಭಾರತದಲ್ಲಿ ಹೆಚ್ಚು ಥಿಯೇಟರ್ ಗಳು ಸಿಗುವುದಿಲ್ಲ. ಇದೇ ವಿಷಯದ ಸಲುವಾಗಿ ಇದೀಗ ಕೆಜಿಎಫ್ ತಂಡ ತಲೆಕೆಡಿಸಿಕೊಳ್ಳುತ್ತಿದೆ. ಅಮೀರ್ ಖಾನ್ ಅವರು ಯಶ್ ರವರಿಗೆ ಇದೇ ವಿಚಾರವಾಗಿ ಕ್ಷಮೆ ಕೂಡ ಕೇಳಿದ್ದಾರೆ. ಸಂಪೂರ್ಣ ಕೆಜಿಎಫ್ ಚಿತ್ರತಂಡಕ್ಕೆ ಅಮೀರ್ ಖಾನ್ ಅವರು ಕ್ಷಮೆ ಕೇಳಿದ್ದಾರೆ. ಸ್ವತಃ ಅಮೀರ್ ಖಾನ್ ಅವರು ಯಶ್ ಅವರಿಗೆ ಪತ್ರವನ್ನು ಬರೆದು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸ್ವತಃ ಯಶ್ ಅವರಿಗೆ ಕರೆ ಮಾಡಿ ಅಮೀರ್ ಖಾನ್ ಅವರು ಎರಡೂ ಚಿತ್ರಗಳ ಬಿಡುಗಡೆಯ ವಿಚಾರವಾಗಿ ಚರ್ಚೆ ಮಾಡಿದ್ದಾರೆ.

ಅಮೀರ್ ಖಾನ್ ಅವರು ಯಶ್ ಅವರಿಗೆ ಫೋನ್ ಮಾಡಿ ಈ ರೀತಿಯಾಗಿ ಮಾತನಾಡಿದ್ದಾರೆ “ನಾನು ನನ್ನ ಸಿನಿಮಾವನ್ನು ಕೂಡ ಏಪ್ರಿಲ್ 14 ಕ್ಕೆ ಬಿಡುಗಡೆ ಮಾಡಲಿದೆ. ಈ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ. ನನಗೆ ನಿಮ್ಮ ಮೇಲೆ ಆಗಲಿ ಅಥವಾ ಕೆಜಿಎಫ್ ಚಿತ್ರದ ಮೇಲೆ ಆಗಲಿ ಯಾವುದೇ ರೀತಿಯ ದ್ವೇಷವಿಲ್ಲ. ಕೆಜಿಎಫ್ ಚಿತ್ರಕ್ಕೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ. ಬೈಸಾಖಿ ಹಬ್ಬದ ದಿನವೇ ನಾವು ಬಿಡುಗಡೆ ಮಾಡಬೇಕು ಎಂದು ಖಡಾಖಂಡಿತವಾಗಿ ನಿರ್ಧಾರ ಮಾಡಿದ್ದೇವೆ. ನಿಮ್ಮ ಚಿತ್ರಕ್ಕೆ ನಾನು ಅಡ್ಡಿಯಾಗಿರುವುದರಿಂದ ನಿಮ್ಮಲ್ಲಿ ಮನಸಾರೆ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ” ಎಂದು ಯಶ್ ಅವರ ಬಳಿ ಮನಸ್ಸು ಬಿಚ್ಚಿ ಅಮೀರ್ ಖಾನ್ ಅವರು ಮಾತನಾಡಿದರು.

ವಿಜಯ್ ಕಿರಗಂದೂರ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಕೂಡ ಅಮೀರ್ ಖಾನ್ ಅವರು ಕ್ಷಮೆ ಯಾಚಿಸಿದ್ದಾರೆ. ಅಮೀರ್ ಖಾನ್ ಅವರ ಈ ನಿರ್ಧಾರಕ್ಕೆ ಹಲವು ಚಿತ್ರರಂಗದ ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಅಮೀರ್ ಖಾನ್ ಅವರು ನನ್ನ ಚಿತ್ರ ಆ್ಯಕ್ಷನ್ ಸಿನಿಮಾ ಅಲ್ಲ. ಇದು ಪ್ರೇಮ ಕಥೆ ಆಧಾರಿತ ಚಿತ್ರವಾಗಿದ್ದ ಆದ್ದರಿಂದ ಕೆಜಿಎಫ್ ಚಿತ್ರಕ್ಕೆ ನನ್ನ ಚಿತ್ರ ಯಿಂದ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದು ತಿರುಗುತ್ತರ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ ೧ ಬಿಡುಗಡೆಯಾದಾಗ ಶಾರುಖ್ ಖಾನ್ ಅವರು ಸಹ ತಮ್ಮ ಸಿನಿಮಾವನ್ನ ಅದೇ ದಿನದಂದು ಬಿಡುಗಡೆ ಮಾಡಿದ್ದರು. ಆದರೆ ಶಾರುಖ್ ಖಾನ್ ಅವರ ಸಿನಿಮಾ ಸೋತು ನಮ್ಮ ಕೆಜಿಎಫ್ ಚಿತ್ರ ಗೆದ್ದಿತ್ತು. ಈ ಸಲ ಅಮೀರ್ ಖಾನ್ ಮತ್ತು ಯಶ್ ಅವರಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *