ಮಂಗಳಗೌರಿ ಮದುವೆ ವೀಕ್ಷಕರಿಗೆ ದೊಡ್ಡ ಶಾಕ್. ಮಂಗಳಗೌರಿ ಧಾರಾವಾಹಿಯಿಂದ ಹೊರನಡೆದ ಪ್ರಮುಖ ಪಾತ್ರಧಾರಿ

ಮಂಗಳಗೌರಿ ಮದುವೆ ಧಾರಾವಾಹಿಯು ಚಿಕ್ಕ ವಯಸ್ಸಿನ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರಿಗೆ ಕೂಡ ಇಷ್ಟವಾಗುತ್ತದೆ. ಮಂಗಲ ಗೌರಿ ಮದುವೆ ಧಾರಾವಾಹಿ ಪ್ರಾರಂಭವಾಗಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. 2012 ರಲ್ಲಿ ಪ್ರಾರಂಭವಾದ ಪುಟ್ಟ ಗೌರಿ ಮದುವೆ ಮಂಗಳಗೌರಿ ಧಾರಾವಾಹಿಯ ಮೊದಲ ಭಾಗ. 2018 ರ ನಂತರ ಪುಟ್ ಗೌರಿ ಮದುವೆಯನ್ನು ಮಂಗಳಗೌರಿ ಮದುವೆ ಎಂದು ಹೆಸರಿಟ್ಟು ಕಥೆಯನ್ನು ಮುಂದುವರಿಸಲಾಗಿದೆ.6 ಏಪ್ರಿಲ್ 2019 ರಂದು ಪುಟ್ಟ ಗೌರಿ ಧಾರಾವಾಹಿಯನ್ನು ಮಂಗಳಗೌರಿ ಮದುವೆ ಎಂದು ಮರು ನಾಮಕರಣ ಮಾಡಿದ್ದಾರೆ. ಹತ್ತು ವರ್ಷಗಳು ಕಳೆದರೂ ಸಹ ವೀಕ್ಷಕರಿಗೆ ಸ್ವಲ್ಪವೂ ಕೂಡ ಮನೋರಂಜನೆಯ ವಿಷಯದಲ್ಲಿ ಅತೃಪ್ತಿ ಆಗಿಲ್ಲ. ಇನ್ನೂ ಹತ್ತು ವರ್ಷ ಕಳೆದರೂ ಸಹ ಮಂಗಳಗೌರಿ ಧಾರಾವಾಹಿಯನ್ನು ಜನ ತಪ್ಪದೆ ವೀಕ್ಷಿಸುತ್ತಾರೆ.

ಪುಟ್ಟಗೌರಿ ಧಾರಾವಾಹಿಯಲ್ಲಿ ಪ್ರತಿಯೊಬ್ಬರು ಇಷ್ಟ ಪಡಲು ಮೂಲ ಕಾರಣಗಳೆಂದರೆ ಈ ಧಾರಾವಾಹಿಯ ಕಥಾಹಂದರ, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ವಿಶಿಷ್ಟ ಪಾತ್ರಗಳು ಮತ್ತು ಕಲಾವಿದರ ನೈಜ ನಟನೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ರಂಜನಿ ರಾಘವನ್ ಮತ್ತು ರಕ್ಷಿತ್ ಗೌಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಕಾವ್ಯಶ್ರೀ ಗೌಡ ಮತ್ತು ಗಗನ್ ಚಿನ್ನಪ್ಪ ಅವರು ನಾಯಕ ನಟ- ನಟಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಗನ್ ಚಿನ್ನಪ್ಪ ಅವರು ಖಡಕ್ ಐಪಿಎಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಗಳು ಪರದೆಯ ಮೇಲೆ ತುಂಬಾ ಮುದ್ದಾಗಿ ಕಾಣುತ್ತಾರೆ.

ಕಾವ್ಯಶ್ರೀ ಮತ್ತು ಗಗನ್ ಚಿನ್ನಪ್ಪ ಅವರ ಜೋಡಿ ನೋಡಬೇಕೆಂದು ಈ ಧಾರಾವಾಹಿಯನ್ನು ನೋಡುವ ವೀಕ್ಷಕರ ಗುಂಪು ಇದೆ. ಮಂಗಳಗೌರಿ ಧಾರಾವಾಹಿಯ ಪಾತ್ರಗಳಲ್ಲಿ ದೊಡ್ಡ ಬದಲಾವಣೆ ಯಾಗಲಿದೆ. ಈ ಬದಲಾವಣೆ ಹಲವಾರು ವೀಕ್ಷಕರಿಗೆ ನಿರಾಶೆ ಉಂಟು ಮಾಡುವುದು ಖಚಿತ. ಮಂಗಳಗೌರಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ಮಿಂಚುತ್ತಿರುವ ಗಗನ್ ಚಿನ್ನಪ್ಪ ಅವರು ಮಂಗಳಗೌರಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇನ್ಮೇಲೆ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ನಟನಾಗಿ ಗಗನ್ ಅವರು ಕಾಣಿಸಿಕೊಳ್ಳುವುದಿಲ್ಲ. ಗಗನ್ ಬದಲಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕನಟ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.

ಗಗನ್ ಅವರ ಪಾತ್ರಕ್ಕೆ ಇನ್ಮೇಲೆ ಪೃಥ್ವಿ ನಂದನ್ ಎಂಬ ಹೊಸ ನಟ ಜೀವ ತುಂಬಲಿದ್ದಾರೆ. ಪೃಥ್ವಿ ನಂದನ್ ಅವರು ಮೊದಲ ಬಾರಿಗೆ ಕಿರುತೆರೆಗೆ ಕಾಲಿಡಲಿದ್ದಾರೆ. ಇದಕ್ಕಿಂತ ಮುಂಚೆ ಪೃಥ್ವಿ ನಂದನ್ ಅವರು “ನಾನು ಮತ್ತು ವರಲಕ್ಷ್ಮಿ” ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ್ದರು. ಗಗನ್ ಮತ್ತು ಕಾವ್ಯಶ್ರೀ ಅವರನ್ನು ಮನಸಾರೆ ಇಷ್ಟ ಪಟ್ಟಿದ್ದ ವೀಕ್ಷಕರು. ಇನ್ಮೇಲೆ ಕಾವ್ಯಶ್ರೀ ಮತ್ತು ಪೃಥ್ವಿ ನಂದನ್ ಅವರ ಜೋಡಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಧಾರಾವಾಹಿಯಲ್ಲಿ ನಟನೆ ಮಾಡಿ ಕೈತುಂಬ ಹಣ ಸಿಗುತ್ತಿದ್ದರು ಸಹ , ಗಗನ್ ಚಿನ್ನಪ್ಪ ಅವರು ಸಡನ್ನಾಗಿ ಧಾರಾವಾಹಿ ಬಿಟ್ಟು ಹೋಗಲು ಕಾರಣವೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ.

ನಟ ಗಗನ್ ಚಿನ್ನಪ್ಪ ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು ಒಬ್ಬ ಕಾಲ್ ಸೆಂಟರ್ ಹುಡುಗನಾಗಿ. ತದನಂತರ ದೊಡ್ಡ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. ನಂತರ ವಿದೇಶದಲ್ಲಿ ಕೂಡ ಒಂದೆರಡು ವರ್ಷ ಕೆಲಸ ಮಾಡಿ.. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮಾಡೆಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಗಗನ್ ಅವರಿಗೆ 2 ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಕಾರಣಾಂತರಗಳಿಂದ ಗಗನ್ ಅವರು ನಟಿಸಿದ 2 ಚಿತ್ರಗಳು ತೆರೆಕಾಣುವುದಿಲ್ಲ. ಸ್ವಲ್ಪ ದಿನಗಳ ನಂತರ ಅದೃಷ್ಟವಶಾತ್ ಗಗನ್ ಗೆ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸುವ ಅವಕಾಶ ಒದಗುತ್ತದೆ. ಇವರು ಮೂಲತಃ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಈ ಕಾರಣದಿಂದಲೇ ಧಾರಾವಾಹಿಯನ್ನ ಅರ್ಧಕ್ಕೆ ಬಿಟ್ಟು ಗುಡ್ ಬೈ ಹೇಳಿದ್ದಾರೆ.

Leave a Reply

Your email address will not be published. Required fields are marked *