ಅತಿ ಕಡಿಮೆ ಬೆಲೆಗೆ ಹ್ಯಾಚ್ ಬ್ಯಾಕ್ ಕಾರನ್ನು ಮಾರುಕಟ್ಟೆಗೆ ತಂದ ಮಾರುತಿ ಕಂಪನಿ. ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗಲಿರುವ ಹೊಸ ಮಾರುತಿ ಕಾರು.

ಎಷ್ಟೇ ಐಷಾರಾಮಿ ಕಾರುಗಳು ಮಾರುಕಟ್ಟೆಗೆ ಮಾರುತಿ ಕಂಪನಿ ಕಾರುಗಳನ್ನು ಹಿಂದಿಕ್ಕಲು ಸಾಧ್ಯವೇ ಇಲ್ಲ. ಯಾಕಂದರೆ ಮಾರುತಿ ಕಂಪೆನಿಯವರು ಜನರ ಅನುಕೂಲಕ್ಕೆ ತಕ್ಕಂತೆ ಕಾರುಗಳನ್ನು ಮಾರುಕಟ್ಟೆಗೆ ತರುತ್ತಾರೆ. ಮಧ್ಯಮ ವರ್ಗದ ಜನರಿಗೆ ಹತ್ತು ಇಪ್ಪತ್ತು ಲಕ್ಷ ರೂಪಾಯಿ ಗಳನ್ನು ಖರ್ಚು ಮಾಡಿ ಹೊಸ ಕಾರನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತೆ. ಈ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಮಾರುತಿ ಕಂಪನಿ ತನ್ನ ಕಾರುಗಳನ್ನು ತಯಾರು ಮಾಡುತ್ತಾರೆ. 8 ಲಕ್ಷ ರುಪಾಯಿಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ನಿಮಗೆ ಮಾರುತಿ ಕಂಪನಿಯ ಕಾರುಗಳು ಸಿಗುತ್ತವೆ. ಅದರಲ್ಲೂ ಮಾರುತಿ ಆಲ್ಟೊ ಕಾರುಗಳು ಇನ್ನೂ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಮತ್ತು ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ವೆಹಿಕಲ್.

2021 ರ ದಾಖಲೆಗಳ ಪ್ರಕಾರ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳೆಂದರೆ ಅದು ಮಾರುತಿ ಆಲ್ಟೊ ಕಾರುಗಳು. ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 13,000 ಮಾರುತಿ ಆಲ್ಟೊ ಕಾರುಗಳು ಮಾರಾಟವಾಗಿವೆ. ಒಂದೇ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಪ್ರೊಡಕ್ಟ್ ಗಳು ಎಂಬ ಹೆಗ್ಗಳಿಕೆ ಮಾರುತಿ ಕಂಪನಿ ಗೆ ಸಲ್ಲುತ್ತದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮಾರುತಿ ಆಲ್ಟೊ 800 ಕಾರನ್ನು ಬಿಡುಗಡೆ ಮಾಡಿತ್ತು. ಮಾರುಕಟ್ಟೆಗೆ ಬಂದ ಎರಡೇ ತಿಂಗಳಿನಲ್ಲಿ ಅತಿ ಹೆಚ್ಚು ಸೇಲ್ ಪಡೆದುಕೊಂಡಿದೆ. ಇದು ಅತಿ ಕಮ್ಮಿ ಬೆಲೆಯ ಹ್ಯಾಚ್ ಬ್ಯಾಕ್ ಕಾರು. ಆಲ್ಟೊ ಕಾರುಗಳು ಮಧ್ಯಮವರ್ಗದವರಿಗೆ ಅತಿ ಪ್ರಿಯವಾದ ಕಾರು.

ಹೊಸ ವಿನ್ಯಾಸದ ಈ ಮಾರುತಿ ಆಲ್ಟೊ ಕಾರಿನಲ್ಲಿ ನಾಲ್ಕರಿಂದ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಮಾಡೆಲ್ 796 cc ಇಂಜಿನ್ ಹೊಂದಿದೆ. 47.33 ಬಿಎಚ್ ಪಿ ಪವರ್ ಇದೆ. ಮೈಲೇಜ್ ವಿಷಯಕ್ಕೆ ಬಂದರಂತೂ ಮಾರುತಿ ಕಾರುಗಳು ಬೆಸ್ಟ್. ಯಾಕೆಂದರೆ ಇತ್ತೀಚೆಗೆ ಬರುವ ಹೊಸ ಕಾರುಗಳು ಹೆಚ್ಚೆಂದರೆ 15 ರಿಂದ 20 ಕಿಲೋಮೀಟರ್ ಮೈಲೇಜ್ ನೀಡುತ್ತದೆ.ಆದರೆ ಮಾರುತಿ ಆಲ್ಟೊ 800 ಕಾರುಗಳು ಮಾತ್ರ 22 ರಿಂದ 32 ಕಿಲೋಮೀಟರ್ ನಷ್ಟು ಮೈಲೇಜ್ ಗಳನ್ನು ನೀಡುತ್ತವೆ. ಆಲ್ಟೊ 800 ಕಾರುಗಳು 3444 ಮಿ.ಮಿ ರಷ್ಟು ಉದ್ದವಾಗಿದೆ. 60 ಎನ್ ಎಂ ಟಾರ್ಕ್ , 177 ಲೀಟರ್ ನಷ್ಟು ಬೂಟ್ ಸ್ಪೇಸ್ ಹೊಂದಿದೆ.

60 ಲೀಟರ್ ನಷ್ಟು ಇಂಧನ ವನ್ನು ಹಿಡಿಸುವಷ್ಟು ದೊಡ್ಡದಾದ ಟ್ಯಾಂಕ್ ಇದೆ. ಪವರ್ ಸ್ಟಿಯರಿಂಗ್, AC, ಪವರ್ ವಿಂಡೋ ಫ್ರಂಟ್ , ಡ್ರೈವರ್ ಮತ್ತು ಪ್ಯಾಸೆಂಜರ್ ಗಳಿಗೆ ಏರ್ ಬ್ಯಾಗ್, ರಿಮೋಟ್ ಲಾಕಿಂಗ್ ಸೌಲಭ್ಯ , 5 ಸ್ಪೀಡ್ ವೇಗ ಮತ್ತು 3 ಸಿಲಿಂಡರ್ ಗಳು ಹೀಗೆ ಅತ್ಯಾಧುನಿಕ ಸೌಲಭ್ಯಗಳನ್ನು ಆಲ್ಟೊ 800 ಒಳಗೊಂಡಿದೆ. ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಕಾರಿನ ಬೆಲೆ ಎಷ್ಟಿರಬಹುದೆಂದು ನೀವೆಲ್ಲಾ 6-7 ಲಕ್ಷ ಎಂದು ಊಹೆ ಮಾಡಿರಬಹುದು. ನಿಮಗೆ ಆಶ್ಚರ್ಯವೆನಿಸಬಹುದು, ಈ ಹೊಸ ವಿನ್ಯಾಸದ ಆಲ್ಟೊ 800 ಕಾರು ನಿಮಗೆ ಕೇವಲ 3 ಲಕ್ಷ ರುಪಾಯಿಗೆ ಸಿಗಲಿದೆ.

ಶೋರೂಮ್ ಬೆಲೆ 3 ಲಕ್ಷ ರೂಪಾಯಿಗಳು. ಆದರೆ ಇನ್ಶೂರೆನ್ಸ್ ಆರ್ ಟಿ ಓ ಹೀಗೆ ಇನ್ನಿತರ ಖರ್ಚುಗಳನ್ನು ಸೇರಿಸಿದರೆ ಅಬ್ಬಬ್ಬಾ ಎಂದರೆ 3.5 ಲಕ್ಷ ಆಗಬಹುದು ಅಷ್ಟೆ. ಬೇಸ್ ಮಾಡೆಲ್ ನಿಮಗೆ 3 ಲಕ್ಷ ಕ್ಕೆ ಸಿಗುತ್ತದೆ. ಆದರೆ ಟಾಪ್ ಮಾಡೆಲ್ ಬೇಕೆಂದರೆ ನೀವು 5 ಲಕ್ಷ ರುಪಾಯಿಗಳನ್ನು ಕೊಡಲೇಬೇಕು. ದೂರ ಪ್ರಯಾಣ ಮನೆಯನ್ನು ಕೂಡ ಈ ಕಾರ್ ಕಂಫರ್ಟ್ ಆಗಿರುತ್ತದೆ ಮತ್ತು ಹೆಚ್ಚು ಮೈಲೇಜ್ ಕೊಡುತ್ತದೆ. ಇದೇ ಕಾರಣಕ್ಕೆ ಆಲ್ಟೊ ಕಾರುಗಳು ಗ್ರಾಹಕರಿಂದ 4 ಸ್ಟಾರ್ ರೇಟಿಂಗ್ ಪಡೆದಿದೆ. 2-2.5 ಲಕ್ಷ ಕೊಟ್ಟು ಬೈಕ್ ತೆಗೆದುಕೊಳ್ಳುವುದಕ್ಕಿಂತ 3 ಲಕ್ಷ ₹ ಕೊಟ್ಟು ಒಂದು ಒಳ್ಳೆಯ ಕಾರ್ ತೆಗೆದುಕೊಳ್ಳುವುದು ಒಳಿತಲ್ಲವೇ..

Leave a Reply

Your email address will not be published. Required fields are marked *