ದೇವಸ್ಥಾನದಿಂದ ಭಿಕ್ಷುಕಿಯನ್ನು ಹೊರ ಹಾಕಿದ ಜನ ನಂತರ ಭಿಕ್ಷುಕಿ ಮಾಡಿದ ಕೆಲಸವನ್ನು ನೋಡಿ ಭಿಕ್ಷುಕಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಪ್ರಪಂಚದಲ್ಲೇ ಅತಿ ಹೆಚ್ಚು ಭಿಕ್ಷುಕರನ್ನು ಹೊಂದಿರುವ ದೇಶವೆಂದರೆ ಅದು ಭಾರತ ನಮ್ಮ ದೇಶದಲ್ಲಿ ಸುಮಾರು 4 ಲಕ್ಷ ಜನ ಭಿಕ್ಷುಕರಿದ್ದಾರೆ. 2018 ರಲ್ಲಿ ನಡೆದ ಗಣತಿ ಪ್ರಕಾರ ಇದು ತಿಳಿದು ಬಂದಿದೆ. ಕೇವಲ ಪಶ್ಚಿಮ ಬಂಗಾಳ ರಾಜ್ಯದಲ್ಲಿ 82 ಸಾವಿರ ಭಿಕ್ಷುಕರಿದ್ದಾರೆ. ಭಿಕ್ಷುಕರಲ್ಲಿ 2 ವಿಧವಾದ ಜನರಿರುತ್ತಾರೆ. ದೇವರು ಎಲ್ಲವನ್ನೂ ಕೊಟ್ಟಿರುತ್ತಾನೆ ಆದರೆ ಕೆಲಸ ಮಾಡುವ ಮನೋಭಾವನೆಯಿರದೆ ಬೇರೆಯವರ ಬಳಿ ಕೈ ಚಾಚಿ ಬದುಕುವ ಭಿಕ್ಷುಕರು. ಕೆಲಸ ಮಾಡಲು ಕೂಡ ಸಾಧ್ಯವಾಗದೆ ದೈಹಿಕ ಶಕ್ತಿಯನ್ನು ಕಳೆದುಕೊಂಡು ಜನರ ಬಳಿ ಹಣ ಕೇಳಿ ಬದುಕುವ ಭಿಕ್ಷುಕರು ಇನ್ನೊಂದು ವಿಧದವರು.

ಭಿಕ್ಷುಕರು ಬೇರೆಯವರ ಬಳಿ ಕೈ ಚಾಚಿ ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಕಾರಣದಿಂದ ಅವರಿಗೆ ನಾವು ಗೌರವ ನೀಡುವುದಿಲ್ಲ. ಆದರೆ ಎಲ್ಲಾ ಭಿಕ್ಷುಕರು ಒಂದೇ ರೀತಿ ಇರುವುದಿಲ್ಲ. ಭಿಕ್ಷುಕರ ಇನ್ನೊಂದು ಮುಖವನ್ನು ನೀವು ಯಾರು ನೋಡಲಿಕ್ಕೆ ಸಾಧ್ಯವಿಲ್ಲ. ಸ್ನೇಹಿತರೆ ಇಂದು ಕೆಂಪಜ್ಜಿ ಎನ್ನುವ ಭಿಕ್ಷುಕಿಯ ಅಸಮಾನ್ಯ ವ್ಯಕ್ತಿತ್ವವನ್ನು ತಿಳಿದುಕೊಳ್ಳೊಣ. ಕೆಂಪಜ್ಜಿಯ ವಯಸ್ಸು 80. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದವರು. ಕಡೂರು ಪಟ್ಟಣದ ಪ್ರಸಿದ್ಧ ದೇವಸ್ಥಾನದಲ್ಲಿ ಹನುಮಂತನ ಸ್ವಾಮಿಯ ಪ್ರತಿಷ್ಠಾಪನೆಯನ್ನು ಹಮ್ಮಿಕೊಂಡಿದ್ದರು. ಯಾವಾಗಲೂ ಹೊರಗಡೆ ಕೂತುಕೊಳ್ಳುತ್ತಿದ್ದ ಭಿಕ್ಷುಕಿ ಕೆಂಪಜ್ಜಿ ಆ ದಿನ ದೇವಸ್ಥಾನದ ಒಳಗಡೆ ಹೋಗುತ್ತಾಳೆ.

ಕೆಂಪಜ್ಜಿಯನ್ನು ನೋಡಿದ ತಕ್ಷಣ ದೇವಸ್ಥಾನದಲ್ಲಿರುವ ಸಿಬ್ಬಂದಿಗಳು ಹಾಗೆ ಭಕ್ತರು ಇಲ್ಲಿ ಯಾಕೆ ಬಂದಿದ್ದೀಯಾ.. ಹೊರಗಡೆ ಹೋಗು ಕುಳಿತುಕೋ ಎಂದು ನೂ ಕಿ ಹೊರ ತಳ್ಳುತ್ತಾರೆ. ಆಗ ಭಿಕ್ಷುಕಿ ಕೆಂಪಜ್ಜಿ ನಾನು ಈ ದೇವಸ್ಥಾನದ ಅಧ್ಯಕ್ಷರನ್ನು ಕಾಣಲು ಬಂದಿದ್ದೇನೆ ನಿಮ್ಮ ಬಳಿ ಹಣ ಕೇಳಲು ಬಂದಿಲ್ಲ ಎಂದು ಹೇಳುತ್ತಾಳೆ. ಆಗ ದೇವಸ್ಥಾನದಲ್ಲಿರುವ ಸಿಬ್ಬಂದಿಗಳು ಅಧ್ಯಕ್ಷರು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಿಜಿಯಾಗಿದ್ದಾರೆ. ಸಂಜೆ ಕಾರ್ಯಕ್ರಮ ಮುಗಿದ ಮೇಲೆ ಬಾ.. ನೀನು ಭಕ್ತಾದಿಗಳಿಗೆ ತೊಂದರೆ ಕೊಡಬೇಡ ಎಂದು ಹೇಳಿ ಆಚೆ ಕಳುಹಿಸಲು ಪ್ರಯತ್ನ ಪಡುತ್ತಾರೆ. ಹಾಗಾಗಿ ಇಲ್ಲ ನಾನು ಹೊರಗಡೆ ಹೋಗಲು ಅಧ್ಯಕ್ಷರು ಸಿಗದೇ ಇದ್ದರೂ ಪರವಾಗಿಲ್ಲ ಸ್ವಾಮೀಜಿಯ ಬಳಿ ನಾನು ಹೋಗುತ್ತೇನೆ ಎಂದು ಹ’ಠ ಮಾಡುತ್ತಾಳೆ.

ದೇವಸ್ಥಾನದ ಸಿಬ್ಬಂದಿಗಳು ಕೆಂಪಜ್ಜಿ ಗೆ ಏನಾದರೂ ಮಾಡಿಕೋ ಎಂದು ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡುತ್ತಾರೆ. ತದನಂತರ ಕೆಂಪಜ್ಜಿ ಸ್ವಾಮೀಜಿ ಬಳಿ ಹೋಗಿ 5೦೦ ರೂಪಾಯಿಯ ನೋಟುಗಳ ಕಟ್ಟನ್ನು ತೆಗೆದು ಸ್ವಾಮೀಜಿಯ ಬಳಿ ಇಟ್ಟು ಈ ರೀತಿಯಾಗಿ ಹೇಳುತ್ತಾಳೆ “ಸ್ವಾಮಿಜಿ ಇದರಲ್ಲಿ 500 ರೂಪಾಯಿಯ ಇಪ್ಪತ್ತು ನೋಟುಗಳಿವೆ. ಅಂದರೆ 10 ಸಾವಿರ ರೂಪಾಯಿಗಳು ಇವೆ. ಇದು ನಾನು ಕಷ್ಟಪಟ್ಟು ಭಿಕ್ಷೆ ಬೇಡಿ ಸಂಪಾದಿಸಿರುವ ಹಣ. ನನ್ನ ಜೀವಮಾನದಲ್ಲಿ ನಾನು ಹಣವನ್ನು ಬೇರೆಯವರಿಂದ ಕ’ಸಿ’ದುಕೊಂಡಿದ್ದೇನೆ ಹೊರತು, ನನ್ನಿಂದ ಯಾರಿಗೂ ಉಪಕಾರವಾಗಿಲ್ಲ. ಆದ್ದರಿಂದ ಈ 10 ಸಾವಿರ ರೂಪಾಯಿಗಳನ್ನು ನೀವು ಇಟ್ಟುಕೊಂಡು ಹನುಮಂತ ದೇವರಿಗೆ ಬೆಳ್ಳಿ ಮುಖವಾಡ ವನ್ನು ಮಾಡಿಸಿ, ಇದು ನನ್ನ ವತಿಯಿಂದ ಚಿಕ್ಕ ದೇಣಿಗೆ” ಎಂದು ಹೇಳುತ್ತಾಳೆ.

ಭಿಕ್ಷುಕಿ ಕೆಂಪಜ್ಜಿಯ ಈ ಕೆಲಸವನ್ನು ನೋಡಿ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತಾದಿಗಳೆಲ್ಲ ಒಂದು ಸೆಕೆಂಡ್ ದಿಗ್ಭ್ರಮೆಗೊಳಗಾಗುತ್ತಾರೆ. ಅಜ್ಜಿ ಮಾಡಿದ ಈ ಕೆಲಸಕ್ಕೆ ಪ್ರತಿಯೊಬ್ಬರೂ ಧನ್ಯವಾದ ತಿಳಿಸುತ್ತಾರೆ. ಕೆಂಪಜ್ಜಿಯ ಜೊತೆ ಭಕ್ತಾದಿಗಳು ಫೋಟೋ ಮತ್ತು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಅಜ್ಜಿಯ ಸಾಧನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಂಪಜ್ಜಿಯ ಇನ್ನೊಂದು ಸಾಧನೆ ಕೂಡ ಬೆಳಕಿಗೆ ಬಂದಿದೆ. 2019 ರಲ್ಲಿ ಇದೇ ಭಿಕ್ಷುಕಿ ಪಾತಾಳಾ೦ಜನೇಯ ದೇವಸ್ಥಾನಕ್ಕೆ ಕೂಡ ಹತ್ತು ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದರು. ಭಿಕ್ಷುಕಿ ಕೆಂಪಜ್ಜಿಯು ಪ್ರತಿದಿನ ಸಾಯಿಬಾಬಾ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಾಳೆ. ಮತ್ತು ಪ್ರತಿದಿನ ಇವಳಿಗೆ ಭಾಸ್ಕರ್ ಎಂಬ ಹೋಟೆಲ್ ಮಾಲೀಕ ಉಚಿತವಾಗಿ ಊಟ ತಿಂಡಿ ನೀಡುತ್ತಾರೆ.

Leave a Reply

Your email address will not be published. Required fields are marked *