ಪುನೀತ್ ರಾಜ್ ಕುಮಾರ್ ಬುಲೆಟ್ ಪ್ರಕಾಶ್ ತೀ’ರಿ ಹೋದಾಗ 5 ಲಕ್ಷ ರೂಪಾಯಿ ಕೊಟ್ಟಿದ್ದು ಸುಳ್ಳು ಎಂದ ರಕ್ಷಕ ಬುಲೆಟ್!

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿದ ಮೇಲೆ ಅವರ ಬಗ್ಗೆ ನಮಗೆ ಗೊತ್ತಿಲ್ಲದಂತಹ ಹಲವಾರು ಸುದ್ದಿಗಳು ಒಂದಲ್ಲ ಒಂದು ರೀತಿಯಲ್ಲಿ ಹೊರಗಡೆ ಬರುತ್ತಾ ಇದೆ. ಅವರು ಯಾರಿಗೂ ತಿಳಿಯದಂತೆ ಎಷ್ಟೋ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ. ಸಾವಿರಾರು ಮಕ್ಕಳ ಶಿಕ್ಷಣವನ್ನು ನಿಭಾಯಿಸುತ್ತಿದ್ದರು ನಮ್ಮ ಅಪ್ಪು. ಹಾಗೆಯೇ ಮನೆಗೆ ಬಂದವರಿಗೂ ಕೂಡ ತಮ್ಮ ಕೈಯಲ್ಲಾದ ಸಹಾಯ ಮಾಡದೆ ಕಳಿಸುತ್ತಿರಲಿಲ್ಲ. ಇಂತಹ ರಾಜರತ್ನ ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದೂ ನಮ್ಮ ಕನ್ನಡ ಜನತೆಗೆ ಇಂದಿಗೂ ಕೂಡ ಅಸಾಧ್ಯವಾದ ಮಾತಾಗಿದೆ.

ಕನ್ನಡದ ಪ್ರಸಿದ್ಧ ಹಾಸ್ಯ ನಟರಾದ ಬುಲೆಟ್ ಪ್ರಕಾಶ್ ಅವರು ಕೂಡ ಇಹಲೋಕ ತ್ಯಜಿಸಿದಾಗ ನಮ್ಮ ಪುನೀತ್ ರಾಜ್ ಕುಮಾರ್ ಅವರು ಅವರ ಮನೆಗೆ ಹೋಗಿ ಸುಮಾರು 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಹರಿದಾಡ ತೊಡಗಿತು ನಂತರ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಇದರ ಬಗ್ಗೆ ಮಾತನಾಡಿದ್ದಾರೆ. ಅವರು ಮಾತನಾಡುತ್ತಾ ನನಗೆ ದೊಡ್ಡಮನಿ ಹಾಗೂ ಪುನೀತ್ ಅವರ ಬಗ್ಗೆ ತುಂಬಾ ಗೌರವವಿದೆ ಆದರೆ ಅವರು ನಮಗೆ ಹಣವನ್ನೇ ನೀಡಿಲ್ಲ ಎಂಬ ಮಾತನ್ನ ಮಾಧ್ಯಮದಲ್ಲಿ ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ರಕ್ಷಕ್ ಅವರು ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬಕ್ಕೆ ಹಣದ ಸಹಾಯ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿರುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಬುಲೆಟ್ ನಿಜ ಜೀವನದಲ್ಲೂ ಕೂಡ ರಾಜಕುಮಾರನಂತೆ ತರಿಸಿಕೊಂಡಿದ್ದಾರೆ ಹಲವು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಇದರ ಬಗ್ಗೆ ಹಲವಾರು ನಿದರ್ಶನಗಳನ್ನು ನಾವು ನೋಡುತ್ತಾ ಬಂದಿದ್ದೇವೆ.

ಪುನೀತ್ ಅವರಿಗೆ ನಮ್ಮ ಮುಖ್ಯಮಂತ್ರಿಗಳಿಂದ ಕರ್ನಾಟಕ ರತ್ನ ಪ್ರಶಸ್ತಿ ಕೂಡ ದೊರಕಿದೆ ಆದರೆ ಇದನ್ನ ನೋಡಿ ಕಣ್ತುಂಬಿಸಿಕೊಳ್ಳಲು ಇಂದು ಅವರೇ ನಮ್ಮೊಂದಿಗೆ ಇಲ್ಲ. ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿರುವುದು ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ. ಈ ಸಾಲುಗಳಲ್ಲಿ ಅಪ್ಪು ಅವರು ಕೂಡ ಸೇರ್ಪಡೆಯಾಗಿದ್ದಾರೆ ಎಂಬುದು ನಮಗೆಲ್ಲ ಖುಷಿಯ ವಿಚಾರ. ಆದರೆ ಇದನ್ನು ನೋಡುವುದಕ್ಕಾಗಿ ಪುನೀತ್ ಅವರೇ ಇಲ್ಲ ಎಂಬುದು ಕೂಡ ನಮ್ಮನ್ನು ಕಾಡುತ್ತದೆ.

ನಮ್ಮ ನಿಮ್ಮೆಲ್ಲರ ಪುನೀತ್ ರಾಜ್ ಕುಮಾರ್ ಅವರು ಇಂದಿಗೂ ಕೂಡ ನಮ್ಮೊಂದಿಗೆ ಇದ್ದಾರೆ. ಅವರ ಸಿನಿಮಾಗಳು ಹಾಡುಗಳು ಅವರು ನಿರ್ಮಾಣ ಮಾಡಿರುವ ಅಂತಹ ಸಿನಿಮಾಗಳು ನಮ್ಮ ಜತೆ ಎಂದಿಗೂ ಎಂದೆಂದಿಗೂ ಇರುತ್ತದೆ . ಪುನೀತ್ ಅವರು ನಮ್ಮ ಜತೆ ಇಲ್ಲದಿದ್ದರೂ ಸಹ ಅವರು ತುಂಬಾ ಜನಕ್ಕೆ ಸ್ಫೂರ್ತಿಯಾಗಿದ್ದಾರೆ ಎಷ್ಟೋ ಜನ ಸಾಮಾಜಿಕ ಕಳಕಳಿಯನ್ನು ಅವರಿಂದ ಕಲಿತಿದ್ದಾರೆ. ಅವರಿಂದ ಎಷ್ಟೋ ಜನರು ಒಳ್ಳೆಯ ಹಾದಿಗಳಲ್ಲಿ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *