ಶೂಟಿಂಗ್ ಗೆ ಲೇಟಾಗಿ ಬರುತ್ತಿದ್ದ ಸೆಟ್ ಹುಡುಗನಿಗೆ ಪುನೀತ್ ಅವರು ಮಾಡಿದ್ದೇನು ಗೊತ್ತಾ?

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ತುಂಬಾ ದಿನಗಳೆ ಕಳೆದಿವೆ ಆದರೆ ಇದನ್ನು ಜೀರ್ಣಿಸಿಕೊಳ್ಳುವುದು ನಮಗೆ ಅಸಾಧ್ಯ. ಪುನೀತ್ ಅವರು ತಾವು ಏನೇ ಸಹಾಯ ಮಾಡಿದರೂ ಅದನ್ನು ನೋಡಿದ ತಮ್ಮ ಅಕ್ಕಪಕ್ಕದಲ್ಲಿ ಇರುವವರಿಗೆ ಇದು ಎಲ್ಲಿಯೂ ಕೂಡ ಹೊರಗಡೆ ಹೋಗಬಾರದು ಎಂಬ ಮಾತನ್ನು ಹೇಳುತ್ತಿದ್ದರಂತೆ. ಇವರು ಶೂಟಿಂಗ್ ಗೆ ಹೋದಾಗ ಕೂಡ ಕೈಯಲ್ಲಿ ಆಗದೇ ಇರುವವರಿಗೆ ತಮಗೆ ಆದಷ್ಟು ಸಹಾಯವನ್ನು ಯಾವಾಗಲು ಮಾಡುತ್ತಿದ್ದರಂತೆ.

ಟಗರು ಚಿತ್ರದಿಂದ ಬಹಳ ಖ್ಯಾತಿ ಪಡೆದ ನಟ ಕಾಕ್ರೋಚ್ ಅವರು ಈಗ ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆಲ್ಲ ಗೊತ್ತಿಲ್ಲದ ವಿಚಾರವನ್ನ ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರೀಕರಣ ಮಾಡುತ್ತಿದ್ದಾಗ ಅಲ್ಲಿನ ಸೆಟ್ ಬಾಯ್ ಲೇಟಾಗಿ ಬಂದರಂತೆ. ಇದರಿಂದ ಅವರ ಚಿತ್ರೀಕರಣ ಸ್ವಲ್ಪ ತಡವಾಗಿ ಶುರುವಾಯಿತು ಇದನ್ನ ಗಮನಿಸಿ ನಟ ಪುನೀತ್ ಅವರು ಆ ಸೆಟ್ ಹುಡುಗನನ್ನ ಮಾತನಾಡಲು ಕರೆಯುತ್ತಾರೆ. ಮುಂದೆ ಏನಾಯ್ತು ಎಂದು ನಾವು ಹೇಳುತ್ತೇವೆ ಮುಂದೆ ಓದಿ.

ತಾನು ತಡವಾಗಿ ಬಂದಿದ್ದರಿಂದ ಅಪ್ಪು ಅವರು ತನಗೆ ಏನಾದರೂ ಹೇಳಬಹುದು ಎಂಬ ಮನಸ್ಥಿತಿಯಲ್ಲಿ ಅಸೆಟ್ ಹುಡುಗ ಅವರ ಹತ್ತಿರ ಅಂಜಿಕೆಯಿಂದಲೇ ಹೋಗುತ್ತಾರೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ಹೌದು ಪುನೀತ್ ರಾಜ್ ಕುಮಾರ್ ಅವರು ಸೆಟ್ ಹುಡುಗನನ್ನು ಕರೆದು ತುಂಬಾ ನಯ ವಿನಯದಿಂದ ನೀವು ಏನಕ್ಕೆ ತಡವಾಗಿ ಬರುತ್ತೀರಿ, ನಿಮ್ಮನ್ನು ನಂಬಿಕೊಂಡ ಕೆಲವು ಕೆಲಸಗಳು ತಡವಾದರೆ ಚಿತ್ರೀಕರಣ ಕೂಡ ತಡವಾಗುತ್ತದೆ ಎಂದರು. ಹಾಗೆ ನೀವು ಏಕೆ ಇಷ್ಟೊಂದು ತಡವಾಗಿ ಬಂದಿದ್ದೀರಿ ಎಂದು ಸೆಟ್ ಹುಡುಗನನ್ನು ಕೇಳುತ್ತಾರೆ.

ನಂತರ ಅಸೆಟ್ ಹುಡುಗ ತಾನು ತುಂಬಾ ದೂರದ ಹಳ್ಳಿಯಿಂದ ಬರುತ್ತೇನೆ ನಾನು ಸುಮಾರು 3 ಬಸ್ ಗಳನ್ನು ಬದಲಾಯಿಸಿ ಬರಬೇಕು. ಬಸ್ಸಿನಿಂದ ಇಳಿದ ನಂತರ ಚಿತ್ರೀಕರಣದ ಸ್ಥಳಕ್ಕೆ ಬರಲು ಆಟೋ ತೆಗೆದುಕೊಂಡು ಬರಬೇಕು. ಇವತ್ತು ಆಟ ಕೂಡ ಸ್ವಲ್ಪ ಲೇಟಾಗಿ ಬಂದಿದ್ದರಿಂದ ನಾನು ಚಿತ್ರೀಕರಣಕ್ಕೆ ತಡವಾಗಿ ಬಂದೆ ಎಂಬ ಕಾರಣವನ್ನು ನೀಡುತ್ತಾರೆ. ಈ ಈ ಕಾರಣವನ್ನು ಕೇಳಿದ ಪುನೀತ್ ರಾಜ್ ಕುಮಾರ್ ಅವರು ಏನು ಮಾಡಿರಬಹುದು ಇಂದು ಯಾರೂ ಸಹ ಊಹಿಸಲು ಸಾಧ್ಯವಿಲ್ಲ.

ಇದನ್ನು ಕೇಳಿ ಮನ ಕರಗಿದ ಅಪ್ಪು ತಾವು ಖರೀದಿಸಿದ್ದ ಹೊಸ ಬೈಕ್ ಅನ್ನು ಎಲ್ಲಾ ಡಾಕ್ಯುಮೆಂಟ್ ಜೊತೆಗೆ ಆ ಹುಡುಗನಿಗೆ ಕೊಡುತ್ತಾರೆ. ಹಾಗೆ ನೀವು ನಾಳೆಯಿಂದ ಸೆಟ್ ಗೆ ಸರಿಯಾದ ಸಮಯಕ್ಕೆ ಬನ್ನಿ ಎಂದು ಹೇಳುತ್ತಾರೆ. ನಂತರ ನಿಮಗೆ ಪ್ರತಿ ತಿಂಗಳು ಪೆಟ್ರೋಲ್ ಹಾಕಿಸಲು ಹಣವಿಲ್ಲ ಎಂದರೆ ನನ್ನನ್ನು ಕೇಳಿ ನಾನು ನಿಮ್ಗೆ ಪ್ರತಿ ತಿಂಗಳು ಅದಕ್ಕೆ ಕೂಡ ಹಣ ನೀಡುತ್ತೇನೆ ಎಂದು ಹೇಳಿ ತಮ್ಮ ದೊಡ್ಡ ತನವನ್ನ ಮೆರೆಯುತ್ತಾರೆ. ಈ ಸ್ಥಳದಲ್ಲಿ ಬೇರೆಯವರು ಇದ್ದರೆ ಬಹುಶಃ ಆ ಹುಡುಗನಿಗೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದಿತ್ತೇನೋ ಆದರೆ ಇದನ್ನು ಅಪ್ಪುವವರು ಆತನಿಗೆ ಬೆನ್ನೆಲುಬಾಗಿ ನಿಂತರು.

Leave a Reply

Your email address will not be published. Required fields are marked *