ಅಪ್ಪು ಅವರ ಬಯೋಪಿಕ್ ಸಿನಿಮಾ ಮಾಡಲು ಸಜ್ಜಾದ ಸಂತೋಷ್ ಆನಂದರಾಮ್! ಇದಕ್ಕೆ ಹೀರೋ ಯಾರು ಗೊತ್ತಾ ?

ಇಂದು ನಮ್ಮ ನಿಮ್ಮೆಲ್ಲರ ಜನಪ್ರಿಯ ನಟರಾದ ಪುನೀತ್ ರಾಜ್ ಕುಮಾರ್ ಅವರು ನಮ್ಮ ಜತೆ ಇಲ್ಲ. ಆದರೆ ಅವರು ಮಾಡಿರುವ ಕೆಲಸಗಳು, ಸಿನಿಮಾಗಳು, ಅವರು ಹಾಡಿರುವ ಹಾಡುಗಳು ನಮ್ಮ ಜತೆ ಸದಾ ಕಾಲ ಇರುತ್ತದೆ. ತಾವು ಮಾಡಿರುವ ಎಲ್ಲಾ ಕೆಲಸಗಳು ಬೇರೆಯವರಿಗೆ ಗೊತ್ತಾಗದಂತೆ ನಡೆಸಿಕೊಂಡು ಬಂದಿರುವ ರಾಜರತ್ನ ಇವರು . ಒಂದು ಕೈಯಿಂದ ಮಾಡಿರುವ ಸಹಾಯ ಮತ್ತೊಂದು ಕೈಗೆ ಗೊತ್ತಾಗಬಾರದು ಎಂಬ ಮಾತಿದೆ. ಇದನ್ನು ಚಾಚೂ ತಪ್ಪದೆ ಅಪ್ಪು ಅವರು ಮಾಡುತ್ತಿದ್ದರು.

ಮುಂದಿನ ದಿನಗಳಲ್ಲಿ ನಾವೆಲ್ಲರೂ ಅಪ್ಪು ಅವರ ಸಿನಿಮಾವನ್ನು ಮಿಸ್ ಮಾಡಿಕೊಳ್ಳುತ್ತೇವೆ. ಕೊನೆಯದಾಗಿ ಅವರು ನಟಿಸಿರುವ ಜೇಮ್ಸ್ ಚಿತ್ರವು ತೆರೆಕಂಡ ನಂತರ ಅಪ್ಪು ಅವರ ಮುಂದಿನ ಯಾವುದೇ ಚಿತ್ರ ಚಿತ್ರೀಕರಣ ಪೂರ್ಣ ಗೊಂಡಿಲ್ಲ. ಆದ್ದರಿಂದ ಇದೆ ಅವರ ಅಭಿಮಾನಿಗಳಿಗೆ ಕೊನೆಯ ಚಿತ್ರ ಎನ್ನಬಹುದು. ಅಪ್ಪು ಅವರ ಚಿತ್ರ ಎಂದರೆ ನಾವು ನಮ್ಮ ಕುಟುಂಬದವರನ್ನು ಕಣ್ಣುಮುಚ್ಚಿಕೊಂಡು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಬಹುದು. ಏಕೆಂದರೆ ಅವರ ಸಿನಿಮಾ ಎಂದರೆ ಅಷ್ಟೊಂದು ಸ್ವಚ್ಚತೆ ಇರುತ್ತದೆ.

ಸಂತೋಷ್ ಆನಂದರಾಮ್ ಅವರು ಪುನೀತ್ ಅವರನ್ನ ಹತ್ತಿರದಿಂದ ನೋಡಿದ್ದಾರೆ. ಅವರ ನಡವಳಿಕೆ, ಜೀವನಶೈಲಿ ಅವರಿಗೆ ತುಂಬಾನೇ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅಪ್ಪು ಅವರ ಬಯೋಪಿಕ್ ಚಿತ್ರವನ್ನು ನಿರ್ದೇಶಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಸಂತೋಷ್ ಆನಂದರಾಮ್ ಅಪ್ಪು ಅವರ ದೊಡ್ಡ ಅಭಿಮಾನಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಪುನೀತ್ ಅವರ ಎಲ್ಲ ಅಭಿಮಾನಿಗಳು ಸೇರಿಕೊಂಡು ಸಂತೋಷ್ ಆನಂದರಾಮ್ ಅವರಿಗೆ ತಪ್ಪು ಅವರ ಜೀವನ ಚರಿತ್ರೆಯನ್ನು ಮಾಡಲೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದನ್ನು ಗಮನಿಸಿದ ಸಂತೋಷ್ ಅವರು ಏನು ಹೇಳಿದ್ದಾರೆ ಎಂಬುದನ್ನು ನಾವು ಹೇಳುತ್ತೇವೆ ಮುಂದೆ ಓದಿ.

ಇದನ್ನ ಗಮನಿಸಿದ ಸಂತೋಷ್ ಆನಂದರಾಮ್ ತಮ್ಮ ಟ್ವಿಟರ್ ನಲ್ಲಿ ನಾನು ಅಪ್ಪು ಅವರ ಬಯೋಪಿಕ್ ಚಿತ್ರವನ್ನ ತೆರೆಯ ಮೇಲೆ ತರಲು ನನಗೂ ಆಸೆಯಿದೆ, ಅದಕ್ಕಾಗಿ ನಾನು ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಹಾಗೂ ಅಪ್ಪು ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ ಎಂಬ ಮಾತನ್ನು ಹೇಳಿದ್ದಾರೆ. ಅವರ ಈ ಮಾತನ್ನು ಕೇಳಿ ಅಭಿಮಾನಿಗಳಿಗೆ ತುಂಬಾನೇ ಖುಷಿಯನ್ನ ಉಂಟುಮಾಡಿದೆ. ಅಪ್ಪು ಅವರನ್ನ ತೆರೆಯ ಮೇಲೆ ನೋಡಲು ಆಗದಿದ್ದರೂ ಅವರ ಜೀವನ ಚರಿತ್ರೆಯನ್ನು ನೋಡಲು ಹಲವಾರು ಜನ ಕಾತರದಿಂದ ಕಾಯುತ್ತಿದ್ದಾರೆ.

ಒಂದು ವೇಳೆ ಈ ಸಿನಿಮಾ ಬಂದರೆ ಇದರಲ್ಲಿ ಕಥಾನಾಯಕನಾಗಿ ಯಾರು ನಟಿಸಬಹುದು ಎಂಬ ಚರ್ಚೆಗಳು ಕೂಡ ಶುರುವಾಗಿದೆ. ಹಲವು ಜನರು ಶಿವರಾಜ್ ಕುಮಾರ್ ಅವರು ನಟಿಸಿದರೆ ತುಂಬಾನೇ ಚೆನ್ನಾಗಿ ಮೂಡಿಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು ವಿನಯ್ ರಾಜ್ ಕುಮಾರ್ ಅವರ ಕಿರಿಯ ಮಗನಾದ ಗುರು ರಾಜ್ ಕುಮಾರ್ ಅವರು ಮಾಡಿದರೆ ತುಂಬಾನೇ ಚೆನ್ನಾಗಿ ಇರುತ್ತದೆ ಏಕೆಂದರೆ ಅವರಿಗೂ ಪುನೀತ್ ಅವರಿಗೂ ಹಲವು ರೀತಿಯಲ್ಲಿ ಹೊಂದಾಣಿಕೆ ಕಂಡುಬರುತ್ತದೆ ಎಂಬುದು ಇನ್ನು ಕೆಲವರ ಮಾತು.

ಗುರು ರಾಜ್ ಕುಮಾರ್ ಅವರು ಕೂಡ ಪುನೀತ್ ಅವರಂತೆ ಡ್ಯಾನ್ಸ್ ಹಾಗೂ ಸ್ಟಂಟ್ ಗಳನ್ನ ಚೆನ್ನಾಗಿಯೇ ಮಾಡುತ್ತಾರೆ. ಯಂಗ್ ಪವರ್ ಸ್ಟಾರ್‌ ಎಂದು ಕೂಡ ಹಲವರು ಇವರನ್ನು ಕರೆಯುತ್ತಾರೆ. ಅಪ್ಪು ಅವರ ಬಯೋಪಿಕ್ ತೆರೆಮೇಲೆ ಬಂದರೆ ಅದಕ್ಕೆ ನಾಯಕ ನಟನನ್ನ ಒಬ್ಬರು ಅಥವಾ ಇಬ್ಬರು ಸೇರಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಅವರ ಕುಟುಂಬದವರ ಜೊತೆ, ಅಭಿಮಾನಿಗಳ ಜೊತೆ ಕೂಡಾ ಮಾತುಕತೆ ಮಾಡಿ ಮುಂದಿನ ಹೆಜ್ಜೆಯನ್ನು ಇಡಬೇಕಾಗುತ್ತದೆ. ಇಂತಹ ಚಿತ್ರವನ್ನು ನಿರ್ಮಿಸುವುದು ಬಹಳ ಸುಲಭದ ಮಾತಲ್ಲ ಅಪ್ಪು ಅವರ ವ್ಯಕ್ತಿತ್ವ, ಸಾಧನೆ ಅಗಾಧವಾದದ್ದು. ಅವರನ್ನು ತೆರೆಯ ಮೇಲೆ ತೋರಿಸಬೇಕಾದರೆ ತುಂಬಾನೇ ಮುಂಜಾಗ್ರತೆ ವಹಿಸಬೇಕು.

Leave a Reply

Your email address will not be published. Required fields are marked *