ಸ್ವತಃ ನರೇಂದ್ರ ಮೋದಿಯವರೇ ಪುನೀತ್ ರನ್ನು ಭೇಟಿಯಾದಾಗ ತಮ್ಮ ಪಕ್ಷವನ್ನು ಸೇರಲು ಕೇಳಿದಾಗ ಅಪ್ಪು ಹೇಳಿದ್ದೇನು ಗೊತ್ತಾ

ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬ ಮಾತನ್ನ ಅರಗಿಸಿಕೊಳ್ಳುವುದು ನಮ್ಮಿಂದ ಇಂದೂ ಕೂಡ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ತುಂಬಾ ಪ್ರಭಾವಿ ವ್ಯಕ್ತಿ ಆಗಿದ್ದರು ಆದರೆ ಅವರು ಇದನ್ನು ಇಲ್ಲಿಯೂ ಕೂಡ ತೋರಿಸಿಕೊಳ್ಳುತ್ತಿರಲಿಲ್ಲ. ಎಲ್ಲಾ ಚಿತ್ರರಂಗದಲ್ಲೂ ಕೂಡ ದೊಡ್ಡ ದೊಡ್ಡ ನಟರು ಗಳ ಪರಿಚಯ ಇವರಿಗೆ ಇದೆ ಎಂದು ಎಲ್ಲರಿಗೂ ಈಗ ಗೊತ್ತಾಗುತ್ತಿದೆ. ಅವರ ಅಗಲಿಕೆಯ ನಂತರ ನರೇಂದ್ರ ಮೋದಿ ಅವರನ್ನು ಭೇಟಿಯಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಈಗ ಕೆಲವರು ಅದರ ಬಗ್ಗೆ ಸ್ವಲ್ಪ ಹೆಚ್ಚಿನ ಸುದ್ದಿಯನ್ನ ಹೇಳುತ್ತಿದ್ದಾರೆ.

ಮೋದಿಯವರು ನಮ್ಮ ಕರ್ನಾಟಕಕ್ಕೆ ಪ್ರಚಾರಕ್ಕೆ ಎಂದು ಬಂದಿದ್ದರು ಅವರು ದಾವಣಗೆರೆಗೆ ತೆರಳುವಾಗ ಪುನೀತ್ ಹಾಗೂ ಅವರ ಪತ್ನಿ ಅಶ್ವಿನಿ ಅವರೊಂದಿಗೆ ಭೇಟಿ ಮಾಡಲು ಸಮಯ ನಿಗದಿಯಾಗಿತ್ತು. ಪುನೀತ್ ರಾಜ್ ಕುಮಾರ್ ಅವರನ್ನ ಮೋದಿಯವರು ಭೇಟಿಯಾದಾಗ ಸ್ವತಃ ಮೋದಿಯವರೇ ಅಪ್ಪು ಅವರನ್ನು ಪಕ್ಷಕ್ಕೆ ಸೇರಲು ಆಹ್ವಾನವನ್ನು ನೀಡಿದ್ದರು ಎಂಬ ಸುದ್ದಿಗಳು ಈಗ ಜೋರಾಗಿಯೇ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ . ಆದರೆ ಒಮ್ಮೆ ಆ ಪಕ್ಷದ ಎಲ್ಲಾ ನಾಯಕರು ಸೇರಿ ದೊಡ್ಮನೆ ಯಿಂದ ಯಾರಾದರೂ ಬಂದರೆ ಬಹುದೊಡ್ಡ ಬೆಂಬಲ ಸಿಗುತ್ತದೆ ಎಂದು ಮಾತನಾಡಿದ್ದು ನಿಜ ಎಂದು ನಿರ್ಮಾಪಕರಾದ ಎಸ್ ವಿ ಬಾಬು ಅವರು ಹೇಳಿದ್ದಾರೆ.

ಹಲವಾರು ಪಕ್ಷದ ದೊಡ್ಡ ದೊಡ್ಡ ನಾಯಕರುಗಳು ಇವರ ಮನೆಗೆ ಬಂದು ಪರೋಕ್ಷವಾಗಿ ಬೆಂಬಲವನ್ನೂ ಕೇಳಿದ್ದರು ಆದರೆ ಅಪ್ಪು ಅವರು ತಮ್ಮ ಸೇವೆ ಏನಿದ್ದರೂ ಸಿನಿಮಾ ರಂಗಕ್ಕೆ ಸೀಮಿತ ಎಂದು ಹೇಳಿದರು. ತಾವು ಸಿನಿಮಾರಂಗದಿಂದ ಗಳಿಸಿದ ಅಭಿಮಾನಿಗಳನ್ನ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಅವರನ್ನು ದೊಡ್ಮನೆ ರತ್ನ ಎಂದು ಕರೆಯುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಮಾತಿಗೆ ಪುನೀತ್ ಅವರು ಹೇಳಿ ಮಾಡಿಸಿದ ಮಾದರಿ.

ಸದ್ಯ ದಲ್ಲಿ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಗೆ ಸಜ್ಜಾಗುತ್ತಿದೆ. ಕೊನೆಯ ಬಾರಿ ಅವರ ಸಿನಿಮಾವನ್ನು ನೋಡಿ ಕಣ್ತುಂಬಿಸಿಕೊಳ್ಳುವ ದಿಕ್ಕಿನಲ್ಲಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಡಬ್ಬಿಂಗ್ ಮಾಡಿರಲಿಲ್ಲ ಆದ್ದರಿಂದ ಅಪ್ಪು ಅವರಿಗೆ ಯಾರು ಧ್ವನಿಯನ್ನು ನೀಡುತ್ತಾರೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಕೆಲವರು ಶಿವಣ್ಣ ಅವರ ಧ್ವನಿ ಇದ್ದರೆ ಚೆನ್ನಾಗಿರುತ್ತದೆ ಎಂದಿದ್ದಾರೆ. ಆದರೆ ಶಿವಣ್ಣ ಅವರು ನನ್ನ ವಾಯ್ಸ್ ಅಷ್ಟೊಂದು ಹೊಂದಾಣಿಕೆಯಾಗುವುದಿಲ್ಲ, ಮಿಮಿಕ್ರಿ ಕಲಾವಿದ ರಿಂದ ಧ್ವನಿ ನೀಡಿದರೆ ತುಂಬಾನೇ ಉತ್ತಮವಾಗಿರುತ್ತದೆ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *