ರಾಜ್ ಕುಮಾರ್ ,ಅಪ್ಪು ಮತ್ತು ಅಂಬರೀಷ್ ಅವರಿಗೆ ಸಿಕ್ಕ ಗೌರವ ವಿಷ್ಣುವರ್ಧನ್ ಅವರಿಗೆ ಯಾಕೆ ಸಿಕ್ಕಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟ ಅನಿರುದ್ಧ

ಕನ್ನಡನಾಡಿನ ದಾದಾ ಸಾಹಸಸಿಂಹ ಎಂದೇ ಪ್ರಸಿದ್ಧರಾಗಿದ್ದ ನಟ ವಿಷ್ಣುವರ್ಧನ್ ಅವರು ಮರೆಯಲಾಗದ ಮಾಣಿಕ್ಯ. ಕನ್ನಡ ತಮಿಳು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ವಿಷ್ಣುವರ್ಧನ್ ಅವರು ನಟಿಸಿದ್ದರು. ಸುಮಾರು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ನೂರಕ್ಕೂ ಹೆಚ್ಚು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ವಿಷ್ಣುವರ್ಧನ್ ಗೆ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದು ಬಿರುದು ನೀಡಿದ್ದರು. ಸೂಪರ್ ಸ್ಟಾರ್ ಆಗಿದ್ದರೂ ಸಹ ವಿಷ್ಣುವರ್ಧನ್ ಅವರ ಸರಳ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು. ತುಂಬಾ ಸರಳ ವ್ಯಕ್ತಿತ್ವದಿಂದಲೇ ಲಕ್ಷಾನುಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿದ್ದರು. 30 ಡಿಸೆಂಬರ್ 2009 ಕನ್ನಡಿಗರಿಗೆ ಮರೆಯಲಾಗದ ದಿನ.

2009 ರಲ್ಲಿ ವಿಷ್ಣುವರ್ಧನ್ ಅವರು ಕಾರ್ಡಿಯಾಕ್ ಅ ರೆಸ್ಟ್ ನಿಂದ ಇಹಲೋಕ ತ್ಯಜಿಸಿದರು. ಅವರು ನಮ್ಮನ್ನು ಶಾರೀರಕವಾಗಿ ಬಿಟ್ಟು ಹೋಗಿದ್ದಾರೆ ಹೊರತು ಪ್ರತಿಯೊಬ್ಬರ ಮನಸ್ಸಿನಲ್ಲೂ ಇಂದಿಗೂ ಕೂಡ ಅವರು ನೆಲೆಸಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಮತ್ತು ಕುಟುಂಬಸ್ಥರಿಗೆ ಇಂದಿಗೂ ಕಾಡುವ ಬೇಸರದ ವಿಷಯವೇನೆಂದರೆ ವಿಷ್ಣುವರ್ಧನ್ ಅವರು ತೀ ರಿಕೊಂಡಾಗ ಪುಣ್ಯಭೂಮಿಯಲ್ಲಿ ದಾದಾ ಅವರ ಸ್ಮಾರಕವನ್ನು ಕಟ್ಟಿಸಲು ಸಾಧ್ಯವಾಗಿಲ್ಲ. 220 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ವಿಷ್ಣು ವರ್ಧನ್ ಅವರನ್ನು ಗೌರವಯುತವಾಗಿ ಕಳಿಸಿಕೊಡಲು ಆಗಲಿಲ್ಲ ಎಂಬುದು ಬೇಸರದ ಸಂಗತಿ. ಸ್ಮಾರಕ ನಿರ್ಮಾಣ ಮತ್ತು ಕರ್ನಾಟಕ ರತ್ನದ೦ತಹ ಪದ್ಮ ಪ್ರಶಸ್ತಿ ವಿಷ್ಣುವರ್ಧನ್ ಅವರಿಗೆ ದೂರಕದೆ ಇರಲು ಕಾರಣ ಏನೆಂದು ಅನಿರುದ್ಧ್ ಅವರೇ ವಿಡಿಯೋದಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ ರಂದು ವಿಷ್ಣುವರ್ಧನ್ ವಿಧಿವಶರಾದ ದಿನ ವಿಷ್ಣುವರ್ಧನ್ ಕುಟುಂಬದವರು ಬನಶಂಕರಿ ರುದ್ರಭೂಮಿಯಲ್ಲಿ ಅಂತಿಮ ವಿ’ಧಿವಿಧಾನ ಹಾಗೂ ಸಂಸ್ಕಾರಗಳು ನೆರವೇರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ವಿಷ್ಣುವರ್ಧನ್ ಅವರು ಖಾಸಗಿ ವ್ಯಕ್ತಿ ಅಲ್ಲ. ಸಾರ್ವಜನಿಕ ಆಸ್ತಿಯಾಗಿದ್ದು ರಿಂದ ಸರ್ಕಾರ ಇದಕ್ಕೆ ಒಪ್ಪದೆ, ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಅವರ ಪಕ್ಕದಲ್ಲೇ ವಿಷ್ಣುವರ್ಧನ್ ಅವರ ವಿಧಿ ವಿಧಾನಗಳನ್ನು ನೆರವೇರಿಸಬೇಕೆಂಬ ಸಲಹೆ ನೀಡುತ್ತೆ. ಆಗ ವಿಷ್ಣುವರ್ಧನ್ ಕುಟುಂಬದವರು ಮತ್ತು ಅಂಬರೀಷ್ ಅವರು ಇದಕ್ಕೆ ಒಪ್ಪಿಗೆ ಕೊಡದೆ ರಾಜಕುಮಾರ್ ಅವರ ಸಮಾಧಿಯ ಪಕ್ಕ ವಿಷ್ಣು ಅವರ ಸಮಾಧಿ ಬೇಡ ಎಂದು ಹೇಳುತ್ತಾರೆ. ತದನಂತರ ಕುಟುಂಬದವರು ಸರ್ಕಾರದೊಂದಿಗೆ ಚರ್ಚೆ ಮಾಡಿ ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿ ಅಂತಿಮ ಸಂ ಸ್ಕಾರವನ್ನು ನೆರವೇರಿಸಲು ಸಿದ್ಧರಾಗುತ್ತಾರೆ.

20 ಎಕರೆ ಜಾಗದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಲುವಾಗಿ 2 ಎಕರೆ ಜಾಗವನ್ನು ಮೀಸಲಿಡಲಾಗುತ್ತದೆ. ಮತ್ತು ಅಂತಿಮ ಸಂ ಸ್ಕಾರವನ್ನು ಯಾವುದೇ ತೊಂದರೆಯಿಲ್ಲದೆ ನೆರವೇರಿಸುತ್ತಾರೆ. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ಗೊತ್ತಾಗುತ್ತೆ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಆ ಜಾಗದಲ್ಲಿ ಸಮಸ್ಯೆ ಇದೆಯಂತ. ಆ ಜಾಗದಲ್ಲಿ ಸಮಸ್ಯೆ ಇದ್ದಿದ್ದರಿಂದ ಕೋರ್ಟ್ ನಲ್ಲಿ ಕೇ ಸ್ ದಾಖಲಾಗಿತ್ತು. ವಿಷ್ಣುವರ್ಧನ್ ಅವರಿಗೆ ಮೀಸಲಾಗಿಟ್ಟಿದ್ದ 2 ಎಕರೆಯಲ್ಲಿ ಇನ್ನೇನು ಭೂಮಿ ಪೂಜೆ ಮಾಡಬೇಕು ಎಂದು ಹೊರಟಾಗ ವಿಷ್ಣುವರ್ಧನ್ ಅವರ ಕುಟುಂಬಸ್ಥರ ಮೇಲೆ ಬಾಲಕೃಷ್ಣ ಅವರ ಮಗಳು ಗೀತಾ ಕೋರ್ಟ್ ನಲ್ಲಿ ಕೇ ಸ್ ಹಾಕುತ್ತಾರೆ. ನನ್ನ ಪಾಲಿಗೆ ಮೀಸಲಾಗಿಟ್ಟಿದ್ದ ಜಾಗದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ಅಥವಾ ಸ್ಮಾರಕವನ್ನು ಕಟ್ಟಲು ಅವಕಾಶವನ್ನೂ ಕೊಡುವುದಿಲ್ಲ ಎಂದು ಹೇಳುತ್ತಾರೆ.

ಅಭಿಮಾನ್ ಸ್ಟುಡಿಯೋ ನನ್ನ ತಂದೆ ಕಷ್ಟಪಟ್ಟು ಸಂಪಾದಿಸಿರುವ ಜಾಗ. ಈ ಜಾಗವನ್ನು ನಾನು ಬಿಟ್ಟುಕೊಡೊದೆ ಇಲ್ಲ. ವಿಷ್ಣುವರ್ಧನ್ ಕುಟುಂಬದವರಿಗೆ ಇದೇ ಜಾಗ ಬೇಕಿತ್ತೇ ಎಂದು ಸಂದರ್ಶನಗಳಲ್ಲಿ ಕೂಡ ಗೀತಾ ಬಾಲಕೃಷ್ಣ ಅವರು ಬಾಯಿಗೆ ಬಂದಂತೆ ಮಾತನಾಡಿದ್ದರು. ಗೀತಾ ಅವರು ಹೇಳಿದ ಮಾತುಗಳು ಪಾರ್ಟಿ ವಿಷ್ಣುವರ್ಧನ್ ಅವರ ಮನಸ್ಸಿಗೆ ನೋ ವಾಗುತ್ತದೆ. ಆದ್ದರಿಂದ ಆ ಜಾಗವೇ ಬೇಡ ಎಂದು ಬೆಂಗಳೂರನ್ನು ಬಿಟ್ಟು ವಿಷ್ಣುವರ್ಧನ್ ಕುಟುಂಬದವರು ಮೈಸೂರಿನಲ್ಲಿ ಸ್ಮಾರಕವನ್ನು ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಇನ್ನೇನು ಮೈಸೂರಿನಲ್ಲಿ ಭೂಮಿ ಪೂಜೆ ಮಾಡಬೇಕು ಅನ್ನುವಷ್ಟರಲ್ಲಿ ಕೆಲವು ರೈತರು ಮತ್ತೆ ಕೋರ್ಟ್ ಗೆ ಹೋಗಿ ಅದು ನಮ್ಮ ಜಾಗ ಎಂದು ಕೇ ಸ್ ಹಾಕುತ್ತಾರೆ. 20 ಲಕ್ಷ ರುಪಾಯಿಗಳನ್ನು ಕೊಡುತ್ತೇವೆ ಎಂದರೂ ಸಹ ರೈತರು ಇದಕ್ಕೆ ಒಪ್ಪುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೋರ್ಟ್ ನಲ್ಲಿ ವಾ ದ ವಿ ವಾದಗಳು ನಡೆಯುತ್ತವೆ.

ಕೊನೆಗೂ ವಿಷ್ಣುವರ್ಧನ್ ಕುಟುಂಬದವರಿಗೆ ಗೆಲುವು ಸಿಗುತ್ತದೆ. ಇದೇ ಸಮಯದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಗಳು ಮೈಸೂರಿನಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡುವುದು ಬೇಡ. ನಮಗೆ ಬೆಂಗಳೂರಿನಲ್ಲಿ ದಾದಾ ಅವರ ಸ್ಮಾರಕ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಬೆಂಗಳೂರಿನಲ್ಲಿ ಸ್ಮಾರಕ ಭವನ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೂಡ ಕೇಳಿದರು. ಇದೀಗ ವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ರೆಡಿಯಾಗಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ಆದರೆ ಇಂದಿಗೂ ಅಭಿಮಾನಿಗಳಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಬೆಂಗಳೂರಿನಲ್ಲಿ ಇಲ್ಲ ಎಂಬ ಬೇಸರವಿದೆ. ಸ್ಮಾರಕ ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರು ಅಗಲಿದ ನಂತರ ಯಾವುದೇ ಪದ್ಮಶ್ರೀ ಪ್ರಶಸ್ತಿಗಳನ್ನು ಸರ್ಕಾರ ಪುರಸ್ಕರಿಸಲಿಲ್ಲ ಎಂಬ ಬೇಸರ ಕೂಡ ಅಭಿಮಾನಿಗಳಲ್ಲಿದೆ.

Leave a Reply

Your email address will not be published. Required fields are marked *