ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಹೊರ ನಡೆದ ಮೇಘಾ ಶೆಟ್ಟಿ, ಮತ್ತೆ ಧಾರಾವಾಹಿಗೆ ವಾಪಸ್ಸು ಬರ್ತಾರಾ?

ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ ಧಾರಾವಾಹಿ . ಚಿಕ್ಕಮಕ್ಕಳಿಂದ ವಯಸ್ಸಾದ ಅಜ್ಜ ಅಜ್ಜಿ ಕೂಡ ಈ ದಾರವನ್ನು ಮಿಸ್ ಮಾಡದೆ ನೋಡುತ್ತಾರೆ .ಇದು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿದೆ . 2 ವರ್ಷಗಳ ಹಿಂದೆ ಪ್ರಾರಂಭವಾದ ಈ ಧಾರಾವಾಹಿಯ ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ . ಈ ಧಾರಾವಾಹಿಯನ್ನು ಜನರು ಸಿನಿಮಾ ನೋಡುವ ಹಾಗೆ ನೋಡುತ್ತಾರೆ .ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ನಾಯಕ ನಟನಾಗಿ ಈ ಧಾರಾವಾಹಿಯಲ್ಲಿ ಪಾತ್ರ ವಹಿಸುತ್ತಿದ್ದಾರೆ . ನಾಯಕನಟಿಯಾಗಿ ಮೆಗಾ ಶೆಟ್ಟಿಯವರು ಕಾಣಿಸಿಕೊಂಡಿದ್ದಾರೆ . ಇದೀಗ ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಬ್ರೇಕಿಂಗ್ ನ್ಯೂಸ್ ಹೊರಬಂದಿದೆ .

ಕಳೆದ 5-6 ದಿನಗಳಿಂದ ಎಲ್ಲಾ ಮಾಧ್ಯಮಗಳಲ್ಲೂ ಒಂದೇ ಸುದ್ದಿ ಹರಿದಾಡುತ್ತಿದೆ ಅದೇನೆಂದರೆ ಇನ್ಮುಂದೆ ಮೇಘಾ ಶೆಟ್ಟಿಯವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುವುದಿಲ್ಲ ಎಂದು .ಈಗಾಗಲೇ ಹೊಸ ನಾಯಕಿಯನ್ನು ಕೂಡ ಹುಡುಕುತ್ತಿದ್ದಾರೆ ಇನ್ನು ಕೆಲವು ದಿನಗಳ ಕಾಲ ಮೇಘಾ ಶೆಟ್ಟಿ ಅವರು ನಟಿಸಿರುವ ಎಪಿಸೋಡ್ ಗಳನ್ನು ಪ್ರಸಾರ ಮಾಡಲಾಗುತ್ತದೆ ಎಂಬ ವದಂತಿಗಳು ಇತ್ತೀಚೆಗೆ ಕೇಳಿಬರುತ್ತಿತ್ತು .ಇಷ್ಟೇ ಅಲ್ಲದೆ ಮೇಘಾ ಶೆಟ್ಟಿಯವರು ಇನ್ಮುಂದೆ ಧಾರವಾಹಿಗಳಲ್ಲಿ ನಟಿಸುವುದಿಲ್ಲ. ಇವರು ಇನ್ಮೇಲೆ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರೆ ಎಂಬ ಗಾಳಿ ಸುದ್ದಿಗಳು ಕೇಳಿ ಬರುತ್ತಿವೆ . ಈ ಸುದ್ದಿಗಳನ್ನು ಕೇಳಿ ವೀಕ್ಷಕರು ಆತಂಕಕ್ಕೊಳಗಾಗಿದ್ದರು .

ಆದರೆ ಈಗ ಸ್ವತಃ ಮೇಘಾ ಶೆಟ್ಟಿಯವರೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊವನ್ನು ಮಾಡಿ ಎಲ್ಲಾ ಜೊತೆಜೊತೆಯಲ್ಲಿ ವೀಕ್ಷಕರಿಗೆ ಸ್ಪಷ್ಟೀಕರಣ ನೀಡಿದ್ದಾರೆ .”ಒಂದು ಕುಟುಂಬ ಅಂದಮೇಲೆ ಮನಸ್ತಾಪಗಳು ಹಲವಾರು ಇರುತ್ತದೆ ಹಾಗೆ ನಮ್ಮ ಕುಟುಂಬದಲ್ಲೂ ಕೂಡ ಕೆಲವು ಗೊಂದಲಗಳಿದ್ದವು. ಆದರೆ ಈಗ ಎಲ್ಲಾ ಗೊಂದಲಗಳು   ಬಗೆಹರಿದಿದೆ .ಜೊತೆ ಜೊತೆಯಲಿ ಧಾರಾವಾಹಿ ಸಂಪೂರ್ಣವಾಗಿ ಮುಗಿಯೋ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ನಿಭಾಯಿಸುತ್ತೇನೆ ” ಎಂದು ಹೇಳಿದ ಮೇಘನಾ ಶೆಟ್ಟಿ ಅವರು ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ .

ಮೇಘಾ ಶೆಟ್ಟಿಯವರು ಜೊತೆಜೊತೆಯಲ್ಲಿ ಧಾರಾವಾಹಿಯಿಂದ ಹೊರ ಹೋಗುತ್ತಾರೆ ಎಂಬುದು ಸುಳ್ಳು ಸುದ್ದಿ ಆಗಿತ್ತು .ಇಂತಹ ಸುಳ್ಳು ಸುದ್ದಿಗಳು ಇನ್ಮೇಲೆ ಹಬ್ಬದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಮೇಘಾ ಶೆಟ್ಟಿಯವರು ಆಶ್ವಾಸನೆ ನೀಡಿದ್ದಾರೆ . ತನಗೆ ಜೀವ ಕೊಟ್ಟ ಜೋತೆ ಜೋತೆಯಲಿ ಧಾರಾವಾಹಿಯನ್ನು ಯಾವತ್ತೂ ಬಿಟ್ಟು ಹೋಗುವುದಿಲ್ಲ. ನಾನು ಜೊತೆ ಜೊತೆಯಲ್ಲಿ ಕುಟುಂಬಕ್ಕೆ ಸದಾ ಚಿರರುಣಿ ಆಗಿರುತ್ತೇನೆ ಎಂದು ತಮ್ಮ ಭಾವನೆಗಳನ್ನು ಮೇಘಾ ಶೆಟ್ಟಿ ಅವರು ತಿಳಿಸಿದ್ದಾರೆ. ಆತಂಕಗೊಂಡಿದ್ದ ಅನೇಕ ವೀಕ್ಷಕರಿಗೆ ಇದೊಂದು ಸಂತಸದ ಸುದ್ದಿಯಾಗಿದೆ .

Leave a Reply

Your email address will not be published. Required fields are marked *