1800 ಮಕ್ಕಳಿಗೆ ಅಪ್ಪು ಕೊಡಿಸುತ್ತಿದ್ದ ವಿದ್ಯಾಭ್ಯಾಸದ ಜವಬ್ದಾರಿಯನ್ನು ತೆಗೆದುಕೊಂಡ ನಟ ವಿಶಾಲ್

ನಮಗೆಲ್ಲ ತಿಳಿದಿರುವಂತೆ  ಪವರ್ ಸ್ಟಾರ್‌ ಎಂದೇ ಹೆಸರಾದ ಪುನೀತ್ ರಾಜ್ ಕುಮಾರ್ ಅವರು ನಮ್ಮೊಂದಿಗೆ ಇಂದು ಇಲ್ಲ. ಆದರೆ ಅವರ ನೆನಪುಗಳು ಸದಾ ನಮ್ಮ ಜತೆಗೇ ಇರುತ್ತದೆ. ಅವರ ಹಲವಾರು ಸಿನಿಮಾಗಳು, ಅವರ ಹಾಡುಗಳು ಎಲ್ಲವೂ ಇನ್ನೂ ನಮ್ಮ ತಲೆಯಲ್ಲಿ ಮೊಳಗುತ್ತಲೇ ಇದೆ. ಅವರನ್ನು ಕೊನೆಯ ಬಾರಿ ನೋಡಲು ಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಇಷ್ಟು ಜನ ಒಬ್ಬರನ್ನ ನೋಡಲು ಸೇರಿರುವುದು ಇದೊಂದು ಇತಿಹಾಸ ಎನ್ನಲಾಗುತ್ತಿದೆ. ಗಾಂಧೀಜಿ ಅವರು ಇಹಲೋಕ ತ್ಯಜಿಸಿದಾಗ ಇಷ್ಟೊಂದು ಜನರು ಸೇರಿದ್ದರಂತೆ. ಅದಾದ ಮೇಲೆ ನಮ್ಮ ಭಾರತದಲ್ಲಿ ಮತ್ತೊಮ್ಮೆ ಈ ತರಹ ಆಗುತ್ತಿರುವುದು ಅಪ್ಪು ಅವರು ಇಹಲೋಕವನ್ನು ತ್ಯಜಿಸಿದಾಗ.

ಅಪ್ಪು ಅವರು ಇಲ್ಲ ಎಂಬ ಸುದ್ದಿಯನ್ನ ಕೇಳುತ್ತಿದ್ದಂತೆ ಹಲವಾರು ಬೇರೆ ರಾಜ್ಯದ ದೊಡ್ಡ ದೊಡ್ಡ ನಟರುಗಳು, ರಾಜಕಾರಣಿಗಳು ಇಂತಹ ಘಟನೆ ನಡೆದಿರುವುದು ನಿಜಕ್ಕೂ ಕಹಿಯ ಸಂಗತಿ ಎಂದು ಬರೆದುಕೊಂಡಿದ್ದಾರೆ. ತಮಿಳಿನ ಹೆಸರಾಂತ ನಟರಾದ ವಿಶಾಲ್ ಅವರು ಪುನೀತ್ ಅವರ ಸ್ನೇಹಿತರು ಈಗ ವಿಶಾಲ್ ಅವರು ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೌದು, ನಮ್ಮ ಪುನೀತ್ ಅವರು ಸುಮಾರು 1800 ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು, ಮುಂದಿನ ವರ್ಷದಿಂದ ನಾನು 1800 ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸವನ್ನ ನೋಡಿಕೊಳ್ಳುತ್ತೇನೆ ಎಂದು ತಮಿಳು ನಟ ವಿಶಾಲ್ ಭರವಸೆ ನೀಡಿದ್ದಾರೆ.

ವಿಶಾಲ್ ಅವರ ಈ ನಿರ್ಧಾರದಿಂದ ಹಲವಾರು ಜನರ ಮನಸ್ಸನ್ನು ಗೆದ್ದಿದ್ದಾರೆ. ಹಾಗೆ ತುಂಬಾ ಜನರು ಇವರನ್ನು ಹೊಗಳುತ್ತಿದ್ದಾರೆ. ಅಪ್ಪು ಪರವಾಗಿ ಕೋಟ್ಯಾಂತರ ಕನ್ನಡಿಗರು ವಿಶಾಲ್ ಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ. ಇದು ವಿಶಾಲ್ ಅವರ ದೊಡ್ಡ ಮನಸ್ಸು. ನಮ್ಮ ಪುನೀತ್ ಅವರು ಯಾವ ಮಟ್ಟಕ್ಕೆ ಸ್ನೇಹಿತರನ್ನ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೆ ಇದೇ ದೊಡ್ಡ ಉದಾಹರಣೆ. ಅಪ್ಪು ಅವರ ಹಾಗೆ ಅವರ ಸ್ನೇಹಿತರು ಕೂಡ ಯುವರತ್ನ ಗಳು. ತೆಲುಗಿನ ಬಹುದೊಡ್ಡ ನಟರಾದ ಅಲ್ಲು ಅರ್ಜುನ್ ಕೂಡ ಪುನೀತ್ ಅವರ ಆಪ್ತರಾಗಿದ್ದರು. ಅವರು ಕೂಡ ಅಪ್ಪು ಇಲ್ಲ ಎಂಬ ವಿಷಯವನ್ನು ಕೇಳಿದ ತಕ್ಷಣ ನಂಬಲು ಸಾಧ್ಯವಾಗಿಲ್ಲ ಎಂಬ ಮಾತನ್ನು ಹಂಚಿಕೊಂಡಿದ್ದಾರೆ.

ನಮ್ಮ ದೇಶದ ಪ್ರಧಾನಮಂತ್ರಿಯಾದ ಮೋದಿಯವರು ಕೂಡ ಅಪ್ಪು ಅವರನ್ನು ಭೇಟಿಯಾದ ಫೋಟೋವನ್ನು ಹಾಕಿ ಇದು ನಿಜಕ್ಕೂ ನಂಬಲಾಗದಂತಹ ಸಂಗತಿ ಈ ತರಹ ಆಗಬಾರದಿತ್ತು ಎಂಬ ಮಾತನ್ನು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿರುವುದು ಬರೀ ನಮ್ಮ ಕನ್ನಡ ಚಿತ್ರರಂಗಕ್ಕೆ ಅಲ್ಲದೆ ಇದು ಇಡೀ ಭಾರತ ಚಿತ್ರರಂಗಕ್ಕೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ ಎಂದು ಹೇಳಬಹುದು. ಪುನೀತ್ ಅವರು ಅನ್ಯಭಾಷೆಯ ಚಿತ್ರಗಳನ್ನು ಮಾಡಿಲ್ಲ. ಆದರೂ ತಮ್ಮದೇ ಕನ್ನಡ ಚಿತ್ರಗಳಿಂದ ಇಡೀ ದೇಶಾದ್ಯಂತ ತಮ್ಮ ಛಾಪನ್ನ ಮೂಡಿಸಿದ್ದಾರೆ.

Leave a Reply

Your email address will not be published. Required fields are marked *