ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡ ಭಾಷೆ. ವಿಶ್ವ ಮಟ್ಟದಲ್ಲಿ ರೆಕಾರ್ಡ್ ಸೃಷ್ಟಿ ಮಾಡಿದ 5 ಲಕ್ಷ ಕನ್ನಡಿಗರು

ಕನ್ನಡ ಬೇರೆ ಜನರಿಗೆ ಕೇವಲ ಭಾಷೆ ಇರಬಹುದು, ಆದರೆ ನಮ್ಮ ಕನ್ನಡಿಗರಿಗೆ ಕನ್ನಡ ಅಂದರೆ ಭಾವನೆ, ಜೀವ ಮತ್ತು ಉಸಿರು.  ಕನ್ನಡ ಭಾಷೆ ಅತಿ ಹಳೆಯ ದ್ರಾವಿಡಿಯನ್ ಭಾಷೆಯಾಗಿದೆ. ನಾಲ್ಕನೇ ಶತಮಾನದಲ್ಲಿ ಕನ್ನಡ ಭಾಷೆಯ ಶಾಸನವು ಹಲ್ಮಿಡಿ ಸಮುದಾಯದಲ್ಲಿ ಹುಟ್ಟಿಕೊಂಡಿತ್ತು. ಶಕ್ತಿಶಾಲಿ ಸಾಮ್ರಾಜ್ಯಗಳಾಗಿದ್ದ ಚಾಲುಕ್ಯ, ಕದಂಬ, ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳಲ್ಲಿ ಕನ್ನಡವನ್ನೇ ಮಾತಾಡುತ್ತಿದ್ದರು. ಕರ್ನಾಟಕದಲ್ಲಿ ಕನ್ನಡವು ಅಧಿಕೃತ ಭಾಷೆ.ನಮ್ಮ ರಾಜ್ಯದಲ್ಲಿ 3 ಕೋಟಿಗೂ ಅಧಿಕ ಕನ್ನಡಿಗರಿದ್ದಾರೆ. ನವೆಂಬರ್ ೧ ಬಂತೆಂದರೆ ಕನ್ನಡಿಗರೆಲ್ಲರೂ ಸೇರಿ ಪ್ರತಿ ವರ್ಷ ಹಬ್ಬ ಮಾಡುತ್ತೆವೆ.

ಈ ವರ್ಷ ನಾವೆಲ್ಲರೂ 66 ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಲು ಸಿದ್ಧರಾಗಿದ್ದೇವೆ.ಕನ್ನಡ ರಾಜ್ಯೋತ್ಸವದ ದಿನ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಕೂಡ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಈ ವರ್ಷದ ಕನ್ನಡ ರಾಜ್ಯೋತ್ಸವ ಉಳಿದ ವರ್ಷದ ಹಾಗೆ ಕೇವಲ ಸಡಗರದಿಂದ ತುಂಬಿರುವುದಿಲ್ಲ. ಈ ವರ್ಷ ನಾವೆಲ್ಲರೂ ಎರಡು ದೊಡ್ಡ ಮೈಲಿಗಲ್ಲನ್ನು ಸಾಧಿಸಿದ್ದೆವೆ.ಅಮೆರಿಕದ ಜಾರ್ಜಿಯಾ ಎಂಬ ರಾಜ್ಯದಲ್ಲಿ ನವೆಂಬರ್ ಒಂದನೇ ತಾರೀಕಿನ ದಿನವನ್ನು ಕನ್ನಡ ಭಾಷೆ ಹಾಗೂ ಕನ್ನಡ ರಾಜ್ಯೋತ್ಸವದ ದಿನ ಎಂದು ಗವರ್ನರ್ ಬ್ರಿಯನ್ ಕೆಂಪ್ ಅವರು ಘೋಷಣೆ ಮಾಡಿದ್ದಾರೆ.

ಕನ್ನಡಿಗರ ಗತ್ತು ಇಡೀ ಜಗತ್ತಿಗೇ ಗೊತ್ತು ಎಂದು ಸಾಬೀತು ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಬೆಳವಣಿಗೆ ಆಗಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಅಂತರರಾಷ್ಟ್ರೀಯ ದೇಶಗಳು ಕನ್ನಡಕ್ಕೆ ನೀಡುತ್ತಿರುವ ಮರ್ಯಾದೆಯನ್ನು, ನಮ್ಮ ರಾಜ್ಯದಲ್ಲಿರುವ ಕೆಲವು ಅನ್ಯ ಭಾಷೆಯ ಜನರು ನೀಡುತ್ತಿಲ್ಲ ಎನ್ನುವುದು ಬೇಸರದ ವಿಷಯ.ಇನ್ನೊಂದು ಹೆಮ್ಮೆಯ ವಿಷಯ ಏನೆಂದರೆ ಈ ವರ್ಷ ನಡೆಯುವ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಕರ್ನಾಟಕ ರಾಜ್ಯದಾದ್ಯಂತ 5 ಲಕ್ಷಕ್ಕಿಂತ ಹೆಚ್ಚಿನ ಕನ್ನಡಿಗರು ಕನ್ನಡ ಗೀತೆಗಳನ್ನು ಹಾಡಿದ್ದಾರೆ. ದೇಶದಾದ್ಯಂತ ಸುಮಾರು 1000 ಸ್ಥಳಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿದ್ದಾರೆ.

ಕನ್ನಡದ ಪ್ರಸಿದ್ಧ ಗೀತೆ ಗಳಾದ ಬಾರಿಸು ಕನ್ನಡ ಡಿಂಡಿಮವ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಗೂ ಜೋಗದ ಸಿರಿ ಬೆಳಕಿನಲ್ಲಿ.. ಈ 3 ಗೀತೆಗಳನ್ನು 5 ಲಕ್ಷಕ್ಕಿಂತ ಹೆಚ್ಚು ಗಾಯಕರು ಕರ್ನಾಟಕದಾದ್ಯಂತ ಹಾಡಿದ್ದಾರೆ. ಇದು ಕನ್ನಡಿಗರ ಸಾಧಿಸಿರುವ ಇನ್ನೊಂದು ಮೈಲಿಗಲ್ಲಾಗಿದೆ. ಬೆಂಗಳೂರಿನ ವಿಧಾನಸೌಧದಿಂದ ಹಿಡಿದು ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲಿ ಕನ್ನಡ ಗೀತೆಗಳು ರಾರಾಜಿಸಿದೆ. ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲೂ ಕೂಡ ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಅದ್ದೂರಿ ಉತ್ಸವ ವನ್ನು ಆಚರಿಸಿದ್ದಾರೆ. ಏಕಕಾಲದಲ್ಲಿ 5 ಲಕ್ಷಕ್ಕೂ ಹೆಚ್ಚು ಕಂಠಗಳಲ್ಲಿ ಕನ್ನಡಗೀತೆ ಹಾಡಿರುವುದು ದೇಶಮಟ್ಟದಲ್ಲಿ ಅಷ್ಟೇ ಅಲ್ಲದೆ ವಿಶ್ವ ಮಟ್ಟದಲ್ಲಿ ಕೂಡ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಹೀಗೆ ನಾವೆಲ್ಲರೂ ಕನ್ನಡವನ್ನು ಉಳಿಸೋಣ ಬೆಳೆಸೋಣ. ಜೈ ಕನ್ನಡಾಂಬೆ. ಜೈ ಭುವನೇಶ್ವರಿ.

Leave a Reply

Your email address will not be published. Required fields are marked *