ನ್ಯೂ ಯಿಯರ್ ಅನ್ನು ಸೆಲೆಬ್ರೇಟ್ ಮಾಡಲು ಕವಿತಾ ಮತ್ತು ಚಂದನ್ ಎಲ್ಲಿಗೆ ಹೋಗಿದ್ದಾರೆ ಗೊತ್ತಾ

ಹೊಸ ವರ್ಷವೆಂದರೆ ಹೊಸ ಜೀವನ, ಹೊಸ ಹುರುಪು, ಹೊಸ ಆಲೋಚನೆ ಮತ್ತು ಹೊಸದಾದ ಗುರಿ. ಪ್ರತಿ ವರ್ಷದ ಪ್ರಾರಂಭವನ್ನು ನಾವು ಖುಷಿಯಿಂದಲೇ ಆರಂಭ ಮಾಡುತ್ತೇವೆ. ಅದರಲ್ಲೂ ಹೊಸವರ್ಷವನ್ನು ಆಚರಣೆ ಮಾಡಬೇಕೆಂದು ನಾವು ಹೊಸ ಜಾಗಕ್ಕೆ ಹೋಗಿ ನಮ್ಮ ಖುಷಿಯನ್ನು ಸೆಲಬ್ರೇಟ್ ಮಾಡುತ್ತಾರೆ. ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಭಾರತೀಯರು ಮಾಲ್ಡೀವ್ಸ್ ದುಬೈ ಹೀಗೆ ಬೇರೆ ಬೇರೆ ದೇಶಗಳಿಗೆ ಹೋಗಿ ಕೂಡ ಸೆಲಬ್ರೇಟ್ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ನ್ಯೂಯಿಯರ್ ವನ್ನು ಸೆಲೆಬ್ರೇಟ್ ಮಾಡಲು ದೂರದ ಊರುಗಳಿಗೆ ಹೋಗುವುದು ಸಂಪ್ರದಾಯವಾಗಿದೆ. ಕಿರುತೆರೆ ಮುದ್ದು ಜೋಡಿಗಳಾದ ಕವಿತಾ ಮತ್ತು ಚಿನ್ನನ್ನವರ ಕೂಡ ಇದೀಗ ನ್ಯೂ ಇಯರ್ ಪಾರ್ಟಿ ಮಾಡಲು ವಿಮಾನ ಹತ್ತಿದ್ದಾರೆ.

ಚಂದನ್ ಮತ್ತು ಕವಿತಾ ಅವರು ತಮ್ಮ ವೃತ್ತಿ ಜೀವನವನ್ನು ಇಬ್ಬರೂ ಒಟ್ಟಿಗೆ ಪ್ರಾರಂಭ ಮಾಡಿದ್ದರು. ಹಾಗೆ ಕವಿತಾ ಮತ್ತು ಚಂದನ್ ಅವರು ತಮ್ಮ ದಾಂಪತ್ಯ ಜೀವನವನ್ನು ಕೂಡ ಒಟ್ಟಿಗೆ ಮುಂದುವರೆಸಿದ್ದಾರೆ. ಇದೇ ವರ್ಷದ ಮೇ ತಿಂಗಳಿನಲ್ಲಿ ಕವಿತಾ ಮತ್ತು ಚಂದನ್ ಅವರು ತುಂಬಾ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಕೊ ರೊನಾ ಸಮಯದಲ್ಲಿ ಮದುವೆಯಾದ ಕವಿತಾ ಮತ್ತು ಚಂದನ್ ಅವರು ಕೇವಲ ತಮ್ಮ ಆಪ್ತ ವರ್ಗದವರನ್ನು ಅಷ್ಟೆ ವಿವಾಹಕ್ಕೆ ಆಹ್ವಾನಿಸಿದ್ದರು. ಮದುವೆಯನ್ನು ಹೇಳುವಷ್ಟು ವಿಜೃಂಭಣೆಯಿಂದ ಕವಿತಾ ಮತ್ತು ಚನ್ನನ್ನವರ ಸೆಲೆಬ್ರೇಟ್ ಮಾಡಿ ಕೊಳ್ಳಲು ಆಗಲಿಲ್ಲ. ಐಷಾರಾಮಿಯಾಗಿ ಮದುವೆಯಾಗಲು ಆಗಲಿಲ್ಲ ಎಂದು ಕವಿತಾ ಮತ್ತು ಚಂದನ್ ಗೆ ಬೇಸರವಿದೆ.

ಮದುವೆಯಾದ ತಕ್ಷಣವೇ ಹನಿಮೂನ್ ಗೆ ಅಂತ ಪ್ಲ್ಯಾನ್ ಮಾಡಿಕೊಂಡಿದ್ದರು ಆದರೆ ಮತ್ತೆ ಕರೋನಾ ಕಾರಣದಿಂದ ಹನಿಮೂನ್ ಕೂಡ ಕ್ಯಾನ್ಸಲ್ ಆಗಿತ್ತು. ಸುಮಾರು ಒಂದು ವರ್ಷಗಳ ಕಾಲ ಮದುವೆಯಾದರೂ ಕೂಡ ಎಲ್ಲಿಗೂ ಪ್ರವಾಸ ಮಾಡಲು ಚಂದ ಮತ್ತು ಕವಿತಾ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಇದೀಗ ಹೊಸ ವರ್ಷದ ಪ್ರಯುಕ್ತ ವಾಗಿ ಇಬ್ಬರು ವಿಮಾನ ಹತ್ತಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಬೇರೆ ರಾಜ್ಯಕ್ಕೆ ತೆರಳಿದ್ದಾರೆ. ಮದುವೆಯಾದ ನಂತರ ಕವಿತಾ ಗೌಡ ಅವರಿಗೆ ಬೇರೆ ದೇಶಕ್ಕೆ ಹೋಗಿ ಚಂದನ್ ಅವರೊಟ್ಟಿಗೆ ಕಾಲ ಕಳೆಯಬೇಕೆಂಬ ಆಸೆ ಇತ್ತು ಆದರೆ ಕೋವಿಡ್ ಕಾರಣದಿಂದ ಬೇರೆ ದೇಶಕ್ಕೆ ಹೋಗಿ ಎಂಜಾಯ್ ಮಾಡಲಿಕ್ಕೆ ಸಾಧ್ಯವಾಗಿಲ್ಲ.

ಈ ವರ್ಷದ ಆರಂಭವನ್ನು ಚಂದನ್ ಮತ್ತು ಕವಿತಾ ಅವರು ಗೋವಾದಲ್ಲಿ ಕಳೆಯುತ್ತಿದ್ದಾರೆ. ಮದುವೆಯ ನಂತರ ಇಬ್ಬರೂ ಒಟ್ಟಿಗೆ ಹೊಸದಾದ ಪ್ರದೇಶದಲ್ಲಿ ಕಾಲ ಕಳೆಯುತ್ತಿರುವುದು ಇದೇ ಮೊದಲು. ಗೋವಾದಲ್ಲಿ ಬಿದಿರು ಮನೆಯ ಮುಂದೆ ನಿಂತುಕೊಂಡು ಚಂದನ್ ಮತ್ತು ಕವಿತಾ ಅವರು ಪೋಸ್ ಕೊಟ್ಟಿರುವ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೀಚ್ ಮುಂದೆ ಒಂಟಿ ಮನೆಯಲ್ಲಿ ಕವಿತಾ ಮತ್ತು ಚಂದನ್ ಅವರು ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಹಾಗೆ ಕವಿತಾ ಗೌಡ ಅವರು ಕೂಡ ಗೋವಾದ ಬೀಚ್ ಮುಂದೆ ಫೋಟೋ ತೆಗೆಸಿಕೊಂಡು ಗೋವಾದಲ್ಲಿ ನಾನು ತುಂಬಾ ಖುಷಿಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಬರೆದುಕೊಂಡಿದ್ದಾರೆ

Leave a Reply

Your email address will not be published. Required fields are marked *