ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಶುರು! ಏನೇನು ಇರುತ್ತೆ ಏನೇನು ಇರಲ್ಲ ಅಂತ ಗೊತ್ತಾ?

ದಿನೇದಿನೆ ಕರೋನ ಕೇಸ್ ಗಳು ಹೆಚ್ಚಾಗ್ತಾ ಇರುವುದರಿಂದ ಸರ್ಕಾರ ಮತ್ತೆ ಲಾಕ್ ಡೌನ್ ಜಾರಿ ಮಾಡಿದೆ. ಪ್ರತಿ ವರ್ಷ ಹೊಸ ಅಲೆ ಬರುವುದು ಲಾಕ್ ಡೌನ್ ಜಾರಿ ಮಾಡುವುದು ಇದೇ ರಿಪೀಟ್ ಆಗ್ತಾ ಇದೆ. ಈ ಆಪ್ ಡೌನ್ ನಿಂದ ಯಾವಾಗ ನಮಗೆ ಮುಕ್ತಿ ಸಿಗುತ್ತೋ ಗೊತ್ತಿಲ್ಲ. 2022 ರ ಹೊಸ ವರ್ಷದ ಮೊದಲನೇ ವಾರವೆ ಜನರಿಗೆ ನಿರಾಸೆ ತಂದಿದೆ. ಭಾರತದಲ್ಲಿ ಪ್ರತಿ ದಿನಕ್ಕೆ ಐವತ್ತು ಸಾವಿರಕ್ಕೂ ಹೆಚ್ಚಿನ ಜನರಿಗೆ ಸೋಂ ಕು ತಾಗಿರುವುದರಿಂದ ಲಾಕ್ ಡೌನ್ ಅತ್ಯಗತ್ಯ. ಕರ್ನಾಟಕದಲ್ಲಿ ಪ್ರತಿದಿನ 2 ಸಾವಿರಕ್ಕೂ ಹೆಚ್ಚು ಕೇಸುಗಳು ದಾಖಲಾಗುತ್ತಿವೆ ಮತ್ತು ಅದರಲ್ಲಿ 2 ಸಾವಿರ ಕೇಸ್ ಗಳು ಕೇವಲ ಬೆಂಗಳೂರಿನಲ್ಲಿ ಕಂಡುಬರುತ್ತಿದೆ. ಇದನ್ನು ತಡೆಯಲು ಲಾಕ್ ಡೌನ್ ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ.

ಕರ್ನಾಟಕ ರಾಜ್ಯ ಸರ್ಕಾರ ಜಾರಿ ಮಾಡಿರುವ ಕರ್ಫ್ಯೂ ನಿಯಮಗಳು ಇಂತಿವೆ ನೋಡಿ. ಮುಂದಿನ 2 ವಾರಗಳ ತನಕ ಪ್ರತಿದಿನ ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಇರುತ್ತೆ. ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಸ್ ಸಂಚಾರ ಎಂದಿನಂತೆ ನಡೆಯಲಿವೆ. 10,11,12 ನೇ ತರಗತಿಯನ್ನು ಬಿಟ್ಟು ಉಳಿದ ಎಲ್ಲಾ ತರಗತಿಗಳಿಗೆ ರಜೆ ನೀಡಲಾಗಿದೆ. ಇದು ಕೇವಲ ಬೆಂಗಳೂರಿನ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ ಉಳಿದ ರಾಜ್ಯಗಳ ಶಾಲೆಗಳಲ್ಲಿ ಎಲ್ಲಾ ತರಗತಿಗಳು ಸರ್ವೇಸಾಮಾನ್ಯವಾಗಿ ಸಾಗಲಿವೆ. ಹೋಟೆಲ್ ರೆಸ್ಟೋರೆಂಟ್ ಪಬ್ ಮತ್ತು ಸಿನೆಮಾ ಥಿಯೇಟರ್ ಗಳಲ್ಲಿ ಶೇಕಡಾ ಐವತ್ತ ರಷ್ಟು ಜನರು ಮಾತ್ರ ಅನುಮತಿ ದೊರೆಯುತ್ತದೆ. ಅದರಲ್ಲೂ 2 ಬಾರಿ ವ್ಯಾಕ್ಸಿನೇಷನ್‌ ಆದವರಿಗೆ ಮಾತ್ರ ಈ ಸ್ಥಳಗಳಿಗೆ ಅವಕಾಶವಿರುತ್ತದೆ.

ಮದುವೆ ಮುಂಜಿ ಕಾರ್ಯಕ್ರಮಗಳಿಗೆ ಸರ್ಕಾರವು ಅವಕಾಶವನ್ನು ಒದಗಿಸಲಿದೆ ಆದರೆ ಕೇವಲ ಎರಡು ನೂರು ಜನರಿಗೆ ಮಾತ್ರ ಅವಕಾಶವಿರುತ್ತದೆ. ಮನೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಕೇವಲ ನೂರು ಜನರು ಮಾತ್ರ ಸೇರಬಹುದು. ದೇವಸ್ಥಾನಗಳಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆಯೋದಿಲ್ಲ ಮತ್ತು ಶೇಕಡಾ ಐವತ್ತು ಜನರಿಗೆ ಮಾತ್ರ ಅವಕಾಶವಿರುತ್ತದೆ. ಹೋಗಿ ದೇವರ ದರ್ಶನ ಪಡೆಯಬಹುದು ಅಷ್ಟೇ. ಕಿರಾಣಿ ಮತ್ತು ಇನ್ನಿತರ ಅಂಗಡಿಗಳು ವೀಕೆಂಡ್ ಗಳಲ್ಲಿ ಕ್ಲೋಸ್ ಮಾಡಬೇಕಾಗುತ್ತದೆ.ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಗಳಲ್ಲಿ ಕೇವಲ 50 % ಜನರಿಗೆ ಮಾತ್ರ ಅವಕಾಶ. ಹಾಗೆ ಕ್ರಿಕೆಟ್ ಸ್ಟೇಡಿಯಂ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಗಳಲ್ಲಿ ಕೂಡ ಅರ್ಧದಷ್ಟು ಮಂದಿಗೆ ಮಾತ್ರ ಅವಕಾಶ ದೊರೆಯಲಿದೆ.

ಕೀನ್ಯಾ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆಫೀಸ್ ಗಳು ಓಪನ್ ಆಗಿರುತ್ತವೆ. ಪಬ್ಲಿಕ್ ಪಾರ್ಕ್ ಗಳು ಕ್ಲೋಸ್ ಆಗಿರುತ್ತೆ. ಐಟಿ ಕಂಪನಿಗಳಿಗೆ ಕೆಲಸ ಮಾಡಲು ಸರ್ಕಾರ ಅವಕಾಶ ಕೊಟ್ಟಿದ್ದು ಐಡಿ ಕಾರ್ಡ್ ಹೊಂದಿರುವ ಎಂಪ್ಲಾಯಿ ಗಳು ಆಫೀಸ್ ಗೆ ಹೋಗುವ ಅವಕಾಶ ಇದೆ. ಹೋಮ್ ಡೆಲಿವರಿ ಕೊಡುವ ಸೌಲಭ್ಯಗಳು 24 *7 ಲಭ್ಯವಿರುತ್ತದೆ . ಹಾಲು ತರಕಾರಿ ಪೇಪರ್ ಮತ್ತು ದಿನಸಿ ಅಂಗಡಿಗಳಿಗೆ ಸಂಪೂರ್ಣ ಅವಕಾಶವನ್ನು ನೀಡಲಾಗುತ್ತದೆ ಮತ್ತು ಅವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ದೊಡ್ಡ ದೊಡ್ಡ ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಲ್ಲಿ ಪಾರ್ಸಲ್ ಗಳು ಮಾತ್ರ ಲಭ್ಯವಿರುತ್ತದೆ. ಪ್ರೈವೇಟ್ ವಾಹನಗಳನ್ನು ಬಳಸಲು ಸಂಪೂರ್ಣ ಅವಕಾಶ ಕೂಡ ಇದೆ. ಇದರೊಟ್ಟಿಗೆ ಟ್ರೇನ್ ಮತ್ತು ವಿಮಾನಗಳ ಸಂಚಾರ ಕೂಡ ಸುಸೂತ್ರವಾಗಿ ರಾಜ್ಯದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *