ತಂದೆ ನಡೆದ ಹಾದಿಯಲ್ಲಿ ಮುನ್ನಡೆಯಲಿದ್ದಾಳೆ ಅಪ್ಪು ಮಗಳು ದೃತಿ. ದೊಡ್ಮನೆಯಲ್ಲಿ ಮಾತ್ರ ಇಂಥಾ ಮಕ್ಕಳು ಹುಟ್ಟೋಕೆ ಸಾಧ್ಯ

ಅಪ್ಪುಗೆ ಯಾಕಿಷ್ಟು ಆತುರ ಇತ್ತು, ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುವಂಥ ಅವಸರವೇನಿತ್ತು ಎಂದು ಪ್ರತಿಯೊಬ್ಬ ಕನ್ನಡಿಗನಿಗೂ ಅನಿಸುತ್ತಿದೆ. ಪುನೀತ್ ಅವರನ್ನು ನೋಡಲು ಕೊನೆಯ ದಿನ 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. 46 ವರ್ಷ ವಯಸ್ಸಿನ ನಟ, ಕೇವಲ 29 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಇಷ್ಟೊಂದು ಜನರ ಮನಸ್ಸನ್ನು ಸಂಪಾದಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಥವಾ ರಾಜ್ ಕುಮಾರ್ ಅವರ ಮಗನಾಗಿದ್ದರೆ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ.

ಅಪ್ಪು ಅವರು ಸಿನಿಮಾ ಹಿರೋ ಗಿಂತ ಹೆಚ್ಚಾಗಿ ಒಳ್ಳೆಯ ಗುಣವುಳ್ಳ ಮನುಷ್ಯನಾಗಿದ್ದ. 45 ಉಚಿತ ಶಾಲೆಗಳು, 16 ವೃದ್ಧಾಶ್ರಮಗಳು, 26  ಅನಾಥ ಮಕ್ಕಳು ಮತ್ತು 19 ಗೋಶಾಲೆ ಗಳು.. ಈ ಎಲ್ಲಾ ಸಮಾಜಮುಖಿ ಕೆಲಸಗಳನ್ನು ಪುನೀತ್ ಅವರು ಯಾರಿಗೂ ತಿಳಿಯದಂತೆ ನಿಭಾಯಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುನೀತ್ ಅವರು ಖ್ಯಾತಿ ಗಳಿಸಿದ್ದಾರೆ. ರಾಜ್ ಕುಮಾರ್ ಅವರ ಕುಟುಂಬವನ್ನು ಇಂದಿಗೂ ದೊಡ್ಮನೆ ಎಂದು ಕರೆಯುತ್ತಾರೆ ಎಂದರೆ ಅದಕ್ಕೆ ಪುನೀತ್ ರಾಜ್ ಕುಮಾರ್ ಅವರ ಈ ಎಲ್ಲ ಸತ್ಕಾರ್ಯಗಳು ಮುಖ್ಯ ಕಾರಣ.

ಡಾಕ್ಟರ್ ರಾಜ್ ಕುಮಾರ್ ಅವರು ತಮ್ಮ ಮಕ್ಕಳನ್ನು ಇಡೀ ದೇಶಕ್ಕೆ ಮಾದರಿಯಾಗಿ ಬೆಳೆಸಿದ್ದಾರೆ. ರಾಜ್ ಕುಮಾರ್ ಅವರ ದಾರಿಯನ್ನೇ ಅವರ ಮಕ್ಕಳು ಸಹ ಮುನ್ನಡೆದಿದ್ದಾರೆ. ಡಾ. ರಾಜ್ ಕುಮಾರ್ ಮಕ್ಕಳು ಒಬ್ಬೊಬ್ಬರು ಒಂದೊಂದು ಆದರ್ಶವನ್ನು ರೂಪಿಸಿಕೊಂಡಿದ್ದಾರೆ. ಇವರಿಂದ ಇಲ್ಲಿಯವರೆಗೆ ಒಂದು ಕೆ ಟ್ಟ ಸುದ್ದಿ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿಲ್ಲ. ಪಾರ್ವತಮ್ಮ ಮತ್ತು ರಾಜ್ ಕುಮಾರ್ ಅವರು ಹಾಕಿಕೊಟ್ಟ ದಾರಿ ಅಂಥಾದ್ದು. ಈಗ ಅಪ್ಪು ಹೋಗಾಯ್ತು. ಅಪ್ಪು ಅವರು ತಂದೆಯಂತೆ ತಮ್ಮ ಮಕ್ಕಳಿಗೆ ಆದರ್ಶದ ಮಾರ್ಗವನ್ನು ರೂಢಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ಅವರಿಗೆ ಧೃತಿ ಮತ್ತು ವಂದಿತಾ ಎಂಬ 2 ಮುದ್ದಾದ ಮಕ್ಕಳಿದ್ದಾರೆ. ಚಿಕ್ಕವಯಸ್ಸಿನಲ್ಲೇ ತನ್ನ ಮಕ್ಕಳಿಗೆ ದೊಡ್ಮನೆ ಅಂದರೇನು? ದೊಡ್ಮನೆಯ ನೀತಿ ನಿಯಮ ಮತ್ತು ಸಂಪ್ರದಾಯಗಳೆನು? ಎಂದು ಬೋಧನೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಪ್ರತಿವರ್ಷ ಸಮಾಜ ಸೇವೆಗೋಸ್ಕರ ಕೋಟ್ಯಂತರ ರೂಪಾಯಿಗಳನ್ನು ವಿನಿಯೋಗ ಮಾಡುತ್ತಿದ್ದರು. ಅಪ್ಪು ಹೋದ ಮೇಲೆ ಈ ಎಲ್ಲ ಸಮಾಜ ಸೇವೆಗಳನ್ನು ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಆದರೆ ಅಪ್ಪು ಈ ಎಲ್ಲಾ ಜವಾಬ್ದಾರಿಯನ್ನು ತನ್ನ ಹಿರಿಯ ಮಗಳಾದ ಧೃತಿಗೆ ಒಪ್ಪಿಸಿದ್ದಾರೆ. ಅಪ್ಪುವಿನ ಹಿರಿಯ ಮಗಳಾದ ಧೃತಿ ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಧೃತಿ ವಯಸ್ಸು ಚಿಕ್ಕದಾದರೂ ಕೀರ್ತಿ ದೊಡ್ಡದು. ಚಿಕ್ಕ ವಯಸ್ಸಿನಲ್ಲೇ ಅನೇಕ ಅಂಧ ಮಕ್ಕಳಿಗೆ ದಾರಿದೀಪವಾಗಿದ್ದಾಳೆ.

ಧೃತಿ ಪ್ರತಿವರ್ಷವೂ ಅದೆಷ್ಟೊ ಅಂಧ ಮಕ್ಕಳಿಗೆ ಆಸರೆಯಾಗುತ್ತಿದ್ದಾಳೆ. ಈ ವಿಷಯ ನಮಗೆಲ್ಲ ತಿಳಿದಿಲ್ಲ. ಯಾಕೆಂದರೆ ಪುನೀತ್ ರಾಜ್ ಕುಮಾರ್ ಅವರು ಈ ವಿಷಯ ಎಲ್ಲೂ ಹೊರಬರದಂತೆ ಮಾಧ್ಯಮಗಳಿಗೆ ಮೊದಲೇ ಮುನ್ಸೂಚನೆ ನೀಡಿದ್ದರು. ಪುನೀತ್ ಬಳಿ ಕೋಟ್ಯಂತರ ಹಣವಿದ್ದರು ಧೃತಿ ಮಾತ್ರ ವಿದ್ಯಾರ್ಥಿ ವೇತನದಿಂದ ಬಂದ ಹಣದಲ್ಲಿ ತನ್ನ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಅಪ್ಪು ನೋಡಿಕೊಳ್ಳುತ್ತಿದ್ದ ವೃದ್ಧಾಶ್ರಮ ಗೋಶಾಲೆ ಅನಾಥಾಶ್ರಮ ಗಳನ್ನು ಮುಂದಿನ ದಿನಗಳಲ್ಲಿ ಧೃತಿ ನೋಡಿಕೊಳ್ಳುತ್ತಾಳೆ. ಪುನಿತ್ ಮಾಡುತ್ತಿದ್ದ ಎಲ್ಲಾ ಸಮಾಜ ಸೇವೆಗಳನ್ನು ಮಗಳು ಧೃತಿ ಮುಂದುವರೆಸಲಿದ್ದಾಳೆ. ದೊಡ್ಮನೆಯಲ್ಲಿ ಹುಟ್ಟುವ ಪ್ರತಿಯೊಂದು ಮಗುವು ವಜ್ರ ಅನ್ನೋ ಮಾತಿಗೆ ಧೃತಿ ನೇ ಸಾಕ್ಷಿ.

Leave a Reply

Your email address will not be published. Required fields are marked *