ಪುಷ್ಪಾ ಸಿನಿಮಾವನ್ನ ಪಡೆದುಕೊಳ್ಳಲು ಅಮೆಜಾನ್ ಪ್ರೈಮ್ ಅಲ್ಲು ಅರ್ಜುನ್ ಗೆ ಆಫರ್ ಮಾಡಿದ್ದು ಎಷ್ಟು ಗೊತ್ತಾ?

ಅಲ್ಲು ಅರ್ಜುನ್ ಹಾಗೂ ಕನ್ನಡದ ರಶ್ಮಿಕಾ ಮಂದಣ್ಣ ಅವರು ನಟಿಸಿದ ಪುಷ್ಪಾ ಚಿತ್ರವು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆದಿತ್ತು. ಹಾಗೆ ಇದು ಹಲವು ಭಾಷೆಗಳಲ್ಲಿ ಕೂಡ ಡಬ್ ಆಗಿತ್ತು. ನಮ್ಮ ಕನ್ನಡದಲ್ಲಿ ಕೂಡ ಈ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಇದು ಕೇವಲ 3 4 ಸಿನಿಮಾ ಮಂದಿರಗಳಲ್ಲಿ ಕನ್ನಡ ಭಾಷೆ ಲಭ್ಯವಿತ್ತು. ಆದರೆ ಈಗ ಈ ಸಿನಿಮಾವನ್ನ ಎಲ್ಲರೂ ಕೂಡ ಕನ್ನಡದಲ್ಲಿಯೇ ನಿಮ್ಮ ಮನೆಯಲ್ಲಿ ಕೂತು ನೋಡಬಹುದು. ಅದು ಹೇಗೆ ಅಂತ ನಾವು ಹೇಳುತ್ತೇವೆ ಮುಂದೆ ಓದಿ.

ಹೌದು, ಇದೇ ತಿಂಗಳ ಏಳನೇ ತಾರೀಕಿನಂದು ಪುಷ್ಪಾ ಸಿನೆಮಾವು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನ ಪಡೆದುಕೊಳ್ಳಲು ಅಮೆಜಾನ್ ಪ್ರೈಮ್ ಅವರು ಬರೋಬ್ಬರಿ 22 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಅವರ ಸಿನಿಮಾವೇ ಇಷ್ಟು ದೊಡ್ಡ ಮೊತ್ತಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಹಲವು ಜನ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದೇ ಇದ್ದವರು ಈಗ ತಮ್ಮ ಮನೆಯಲ್ಲೇ ಕುಳಿತು ಈ ಚಿತ್ರವನ್ನ ವೀಕ್ಷಿಸಬಹುದಾಗಿದೆ.

ನಮ್ಮ ಕರ್ನಾಟಕದಲ್ಲಿಯೂ ಕೂಡ ಈ ಸಿನಿಮಾವನ್ನ ಕನ್ನಡದಲ್ಲಿ ವೀಕ್ಷಿಸಲು ಆಗಿಲ್ಲ ಎಂದು ಹಲವು ಜನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಆದರೆ ಈಗ ಎಲ್ಲರೂ ಕೂಡ ನಮ್ಮ ಕನ್ನಡ ಭಾಷೆಯಲ್ಲಿಯೂ ಈ ಸಿನಿಮಾವನ್ನ ನೋಡಬಹುದಾಗಿದೆ. ಈ ಸಿನಿಮಾದಲ್ಲಿ ನಮ್ಮ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅವರ ಕೂಡ ಅಭಿನಯಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಸಿನಿಮಾದಲ್ಲಿ ಕನ್ನಡಕ್ಕೆ ವಾಯ್ಸ್ ಕೊಡಲು ರಶ್ಮಿಕಾ ಮಂದಣ್ಣ ಅವರಿಗೆ ಆಗಲಿಲ್ಲ. ಈ ಸಿನಿಮಾ ಬೇಗ ಬಿಡುಗಡೆಯಾಗಬೇಕು ಎಂಬ ಕಾತರದಿಂದ ರಶ್ಮಿಕಾ ಅವರ ಧ್ವನಿಯಿಂದ ಕೂಡ ಬೇರೆಯವನು ನೀಡಿದ್ದಾರಂತೆ.

ಈ ಸಿನಿಮಾ ಬಿಡುಗಡೆ ಆಗುವ ಮುಂಚೆ ಸಿನಿಮಾದ ನಿರ್ದೇಶಕರಾದ ಸುಕುಮಾರ್ ಅವರು ಹತ್ತು ಕೆಜಿಎಫ್ ಸೇರಿಸಿದರೆ ಒಂದು ಪುಷ್ಪಾ ಸಿನೆಮಾ ಆಗುತ್ತದೆ ಎಂಬ ಮಾತನ್ನ ಹೇಳಿದ್ದರು. ಆದರೆ ಈ ಸಿನಿಮಾವನ್ನು ನೋಡಿದ ನಂತರ ಹಲವು ಜನರು ಹತ್ತು ಪುಷ್ಪ ಸಿನಿಮಾ ಸೇರಿದರೆ ಒಂದು ಮಂಗಳಗೌರಿ ಧಾರಾವಾಹಿ ಆಗುತ್ತದೆ ಎಂದು ಹೇಳಿದ್ದಾರೆ. ಈ ಸಿನಿಮಾ ತೆರೆಕಂಡಾಗ ಹೀಗೆ ಹಲವಾರು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಈ ಸಿನಿಮಾವನ್ನು ನೀವು ವೀಕ್ಷಿಸಿ ಚಿತ್ರ ಹೇಗಿದೆ ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *