30 ವರ್ಷ ವಯಸ್ಸಾದರೂ ವೈಷ್ಣವಿ ಗೌಡ ಅವರು ಮದುವೆಯಾಗಿಲ್ಲ, ಇದಕ್ಕೆ ವೈಷ್ಣವಿ ಹೇಳಿದ ಕಾರಣವೇನು ಗೊತ್ತಾ

ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸ್ಟಾರ್ ನಟಿಯಾಗಿ ಅತ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ .ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಅವರು ಸನ್ನಿಧಿ ಎಂಬ ಪಾತ್ರ ವಹಿಸಿದ್ದರು . ಇವರ ಪಾತ್ರವನ್ನು ಹಾಗೂ ಅಭಿನಯವನ್ನು ಕನ್ನಡಿಗರೆಲ್ಲ ಮೆಚ್ಚಿಕೊಂಡಿದ್ದಾರು .ಪ್ರೀತಿಯಿಂದ ಜನರು ವೈಷ್ಣವಿಯವರನ್ನು ಸನ್ನಿಧಿ ಎಂದೇ ಕರೆಯುತ್ತಾರೆ .2013 ರಲ್ಲಿ ಪ್ರಾರಂಭವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿ ನಂತರ 2020 ರಲ್ಲಿ ಕೊನೆಗೊಂಡಿದೆ .ಸಾವಿರಾರು ಎಪಿಸೋಡ್ ಗಳು ಮುಗಿದಿದ್ದರೂ ವೀಕ್ಷಕರು ಕುತೂಹಲದಿಂದ ಕಣ್ಣು ಬಿಟ್ಟುಕೊಂಡು ಧಾರಾವಾಹಿಯನ್ನು ನೋಡುತ್ತಿದ್ದರು . ಅಗ್ನಿಸಾಕ್ಷಿ ಧಾರಾವಾಹಿ ನಂತರ ವೈಷ್ಣವಿ ಅವರು ಬೇರೆ ಧಾರಾವಾಹಿಗಳಲ್ಲಿ ಅಭಿನಯಿಸಲಿಲ್ಲ .

ಇದೀಗ ವೈಷ್ಣವಿ ಅವರು ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾಳೆ .ಧಾರಾವಾಹಿಯಿಂದ ವೀಕ್ಷಕರಿಗೆ ವೈಷ್ಣವಿ ಅವರ ಮುಖ ಪರಿಚಯ ಅಷ್ಟೇ ಇತ್ತು ಇದೀಗ ವೈಷ್ಣವಿ ಅವರ ವ್ಯಕ್ತಿತ್ವದ ಪರಿಚಯ ಕೂಡ ಆಗಿದೆ .ಯಾವಾಗಲೂ ನಗು ಮುಖದೊಂದಿಗೆ ,ಬೆರೆ ಸ್ಪರ್ಧಿಗಳ ಜೊತೆಗೆ ಕೋಪ ಮಾಡಿಕೊಳ್ಳದೆ ವೈಷ್ಣವಿ ತನ್ನ ಆಟವನ್ನು ಅಚ್ಚುಕಟ್ಟಾಗಿ ಆಡುತ್ತಿದ್ದಾಳೆ.ನೋಡಲು ತುಂಬ ಸುಂದರವಾಗಿರುವ ವೈಷ್ಣವಿ ಅವರಿಗೆ ನೂರಾರು ಮದುವೆ ಪ್ರಪೋಸಲ್ ಗಳು ಬಂದಿವೆಯಂತೆ .

ನೂರಾರು ಜನ ಹುಡುಗರು ಮದುವೆಯಾಗುವಂತೆ ಬೇಡಿಕೆ ಇಟ್ಟಿದ್ದರು ಆದರೆ ವೈಷ್ಣವಿ ಮಾತ್ರ ಯಾವ ಹುಡುಗನನ್ನು ಒಪ್ಪಿಕೊಳ್ಳಲಿಲ್ಲ . ಈ ವಿಚಾರವನ್ನು ಕಿಚ್ಚ ಸುದೀಪ್ ಅವರ ಮುಂದೆ ಸ್ವತಃ ವೈಷ್ಣವಿ ಅವರೇ ಪ್ರಸ್ತಾಪಿಸಿದ್ದರು . ನಿಮಗೆ ಮೂವತ್ತು ವರ್ಷ ನೀವು ಯಾಕೆ ಯಾರನ್ನೂ ಮದುವೆಯಾಗಿಲ್ಲ ಎಂದು ಸುದೀಪ್ ಕೇಳಿದಾಗ ,ನನಗೆ ಯಾವ ಹುಡುಗನೂ ಇಷ್ಟವಾಗಲಿಲ್ಲ, ತನ್ನ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗುವ ಹುಡುಗ ಸಿಗುವವರೆಗೂ ನಾನು ಮದುವೆಯಾಗಲು ರೆಡಿ ಇಲ್ಲ ,ಅದನ್ನು ಬಿಗ್ ಬಾಸ್ ಮುಗಿದ ನಂತರ ನಾನು ಮದುವೆ ಯೋಚನೆ ಮಾಡಬೇಕು ಮನೆಯವರು ಒತ್ತಾಯ ಮಾಡುತ್ತಿರುವ ಕಾರಣದಿಂದ ನಾನು ಯಾವುದಾದರೂ ಹುಡುಗನನ್ನು ಕಟ್ಟಿ ಕೊಳ್ಳಬೇಕೆಂದಿದ್ದೇನೆ ಎಂದು ವೈಷ್ಣವಿಯವರು ನಗುನಗುತ್ತಾ ನಾಚಿಕೆಯಿಂದ ಉತ್ತರಿಸಿದ್ದಾರೆ .

6 ತಿಂಗಳ ಹಿಂದೆಯಷ್ಟೇ ವೈಷ್ಣವಿ ಗೌಡ ಅವರ ಅಣ್ಣನಾದ ಸುನೀಲ್ ಅವರಿಗೆ ಮದುವೆಯಾಗಿದೆ. ಇದೀಗ ಮನೆಮಂದಿಯೆಲ್ಲ ವೈಷ್ಣವಿ ಗೆ ಮದುವೆಯಾಗು ಎಂದು ಒತ್ತಾಯಿಸುತ್ತಿದ್ದಾರೆ . ಇದೇ ವರ್ಷ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ಮುಗಿಸಿ ಬಂದ ಕೂಡಲೇ ಅವರಿಗೆ ಮದುವೆ ಮಾಡುವ ಎಲ್ಲಾ ಸಿದ್ಧತೆಗಳನ್ನು ಕುಟುಂಬದವರು ಮಾಡಿಕೊಂಡಿದ್ದಾರೆ .ವೈಷ್ಣವಿ ಗೌಡ ಅವರು ಹಿಂದಿನ ಬಿಗ್ ಬಾಸ್ ಸೀಸನ್ ವಿನ್ನರ್, ಶೈನ್ ಶೆಟ್ಟಿ ಅವರನ್ನು ಮದುವೆಯಾಗುತ್ತಾರೆ ಎಂಬ ವದಂತಿಗಳು ಕೇಳಿ ಬರುತ್ತಿತ್ತು . ಅದು ಒಂದು ಸುಳ್ಳು ಸುದ್ದಿಯೆಂದು ವೈಷ್ಣವಿ ಅವರೇ ಸ್ಪಷ್ಟನೆ ನೀಡಿದ್ದಾರೆ .ವೈಷ್ಣವಿ ಅವರೇ ಹೇಳುವ ಪ್ರಕಾರ ಅವರ ಮದುವೆ ಆಗುವ ಹುಡುಗ ತುಂಬಾ ಸಿಂಪಲ್ ಆಗಿರಬೇಕು ,ಪ್ರಾಮಾಣಿಕನಾಗಿರಬೇಕು ಹಾಗೆ ನಿಷ್ಠಾವಂತನಾಗಿರಬೇಕು ಇದರ ಜೊತೆಗೆ ಒಳ್ಳೆ ಮನಸ್ಸು ಕೂಡ ಇರಬೇಕು ಎಂದು ವೈಷ್ಣವಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *