ಯಾರಿಗೂ ತಿಳಿಯದಂತೆ ಸದ್ದಿಲ್ಲದೆ ಮದುವೆಯಾದ ಶುಭಾಪುಂಜ ಹುಡುಗ ಯಾರು ಗೊತ್ತಾ?

ಶುಭಾ ಪೂಂಜಾ ಕನ್ನಡ ಚಿತ್ರರಂಗದ ಒಳ್ಳೆಯ ನಟಿ ಇವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇವರು ನಂತರ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಕೂಡ ಎಂಟ್ರಿ ಕೊಟ್ಟಿದ್ದರು. ಅದಾದ ನಂತರ ಇವರು ಕರ್ನಾಟಕದ ಮೂಲೆ ಮೂಲೆಯಲ್ಲೂ ಕೂಡ ಚಿರಪರಿಚಿತರಾಗಿದ್ದರು. ಬಿಗ್ ಬಾಸ್ ನಲ್ಲಿ ಇವರು ತಮ್ಮದೇ ಆದ ಮುದ್ದಾದ ಮಾತುಗಳಿಂದ ನಡವಳಿಕೆಗಳಿಂದ ಜನರ ಮನಸ್ಸನ್ನು ಗೆದ್ದಿದ್ದರು.

ಬಿಗ್ ಬಾಸ್ ನಲ್ಲಿ ಇರುವಾಗಲೇ ಶುಭಾ ಪುಂಜಾ ಅವರು ತಮ್ಮ ಮದುವೆ ಆಗುವ ಹುಡುಗನ ಬಗ್ಗೆ ತುಂಬಾ ಹೇಳುತ್ತಿದ್ದರು. ಅವರನ್ನು ಚಿನ್ನ ಎಂದು ಅವರು ಕರೆಯುತ್ತಿದ್ದರು. ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಹ ತುಂಬಾ ಸಲ ಹೇಳಿದ್ದಾರೆ. ಈಗ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಶುಭಾ ಪುಂಜಾ ಅವರು ತಮ್ಮ ಕನಸಿನ ಹುಡುಗ ಸುಮಂತ್ ಅವರನ್ನು ಮದುವೆಯಾಗಿದ್ದಾರೆ ಇವರು ಒಬ್ಬ ಬ್ಯುಸಿನೆಸ್ ಮೆನ್ ಹಾಗೂ ರೈತ ಕೂಡ. ಇವರನ್ನು ಶುಭಾ ಪುಂಜಾ ಅವರು ಪ್ರೀತಿಸಿದ್ದರಂತೆ.

ಶುಭಾ ಪುಂಜಾ ಅವರು ತಾವು ಮದುವೆಯಾದ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡ ನಂತರವೇ ಈ ವಿಷಯ ಎಲ್ಲರಿಗೂ ತಿಳಿದಿದೆ. ತುಂಬಾ ಹದಿಹರೆಯದ ಹುಡುಗರು ಶುಭಾ ಪೂಂಜಾ ಅವರ ಮದುವೆ ಆಗಿ ಬಿಟ್ಟಿತೆ ಎಂದು ಸುಮ್ಮನೆ ಚೇಷ್ಟೆ ಮಾಡಿದ್ದಾರೆ. ಶುಭಾ ಪೂಂಜಾ ಅವರಿಗೆ ತಾನು ಹುಟ್ಟಿ ಬೆಳೆದ ಊರಿನಲ್ಲೇ ಮದುವೆಯಾಗಬೇಕು ಎಂಬ ಆಸೆ ಇತ್ತಂತೆ ಅದರಂತೆ ಇಂದು ಅವರು ತಮ್ಮ ಊರಿನಲ್ಲಿಯೇ ವಿವಾಹ ಆಗಿದ್ದಾರೆ. ಗುರು ಹಿರಿಯರು ಮತ್ತು ಕುಟುಂಬದವರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಮದುವೆ ಆಗಿದೆ ಎಂದು ಅವರು ಹಂಚಿಕೊಂಡಿದ್ದಾರೆ.

ಸಹಜವಾಗಿ ಸೆಲೆಬ್ರಿಟಿಗಳು ಅಂದ ಮೇಲೆ ಅವರ ಮದುವೆಯ ತುಂಬಾನೆ ಅದ್ಧೂರಿಯಾಗಿ ಇರುತ್ತದೆ. ಆದರೆ ಶುಭಾ ಪುಂಜಾ ಅವರು ಯಾರಿಗೂ ತಿಳಿಯದಂತೆ ತಮ್ಮ ಊರಿನಲ್ಲಿ ಮದುವೆಯಾಗಿದ್ದಾರೆ. ಈಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶುಭಾ ಪೂಂಜಾ ಹಾಗೂ ಅವರ ಪತಿ ಯಾರಿಗೂ ತೊಂದರೆಯಾಗದಂತೆ ತಮ್ಮ ವಿವಾಹ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಈ ವಿಷಯವನ್ನು ತಿಳಿದ ನಂತರ ಅವರ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಶುಭಾ ಪೂಂಜಾ ಅವರ ವಿವಾಹ ಜೀವನಕ್ಕೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *